ಕೊಂಡಾಡಿಕೊಪ್ಪ ಶಾಲೆಗೆ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ ಕೊಡುಗೆ

0

ಪುತ್ತೂರು: ಗ್ರಾಮ ಪಂಚಾಯತ್ ಆಲಂಕಾರು ಇದರ ವತಿಯಿಂದ 2021-2022ನೇ ಸಾಲಿನ ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿಯಲ್ಲಿ ಕೊಂಡಾಡಿಕೊಪ್ಪ ಶಾಲೆಗೆ 74798 ,ರೂಪಾಯಿ ಮೌಲ್ಯದ ಕಂಪ್ಯೂಟರ್, ಸ್ಕ್ಯಾನರ್ ಮತ್ತು ಪ್ರಿಂಟರ್ ಒದಗಿಸಲಾಯಿತು.

ಈ ಸಂದರ್ಭದಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಸುಶೀಲ ಕೊಂಡಾಡಿ, ವಾರಿಜಾ ಕೆ, ಶಾರದಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ವಸಂತ ಶೆಟ್ಟಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ಪ್ರೇಮಾ ಬಿ ಸ್ವಾಗತಿಸಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ ವಂದಿಸಿದರು.

LEAVE A REPLY

Please enter your comment!
Please enter your name here