ಕಾವು ಶ್ರೀದೇವರ ಜಾತ್ರೋತ್ಸವ-ಅಮ್ಚಿನಡ್ಕ ಪೇಟೆ ಸವಾರಿ; ಪಂಚವಟಿನಗರದಲ್ಲಿ ಸಾರ್ವಜನಿಕ ಕಟ್ಟೆಪೂಜೆ- ಸಂಗೀತ ರಸಮಂಜರಿ

0
ಚಿತ್ರ: ಎನ್.ಎಸ್ ಕಾವು

ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಮಾ.26ರ ಶ್ರೀದೇವರ ಅಮ್ಚಿನಡ್ಕ ಪೇಟೆ ಸವಾರಿಯ ಸಂದರ್ಭದಲ್ಲಿ ಕಾವು ಪಂಚವಟಿನಗರದಲ್ಲಿ ನಡೆದ ಸಾರ್ವಜನಿಕ ಕಟ್ಟೆ ಪೂಜೆಯ ಪ್ರಯುಕ್ತ ಪಂಚವಟಿ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಸಂಗೀತ ರಸಮಂಜರಿ-ಪಂಚವಟಿ ಸಂಭ್ರಮ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಭಜನಾ ಕಾರ್ಯಕ್ರಮ:
ಸಾರ್ವಜನಿಕ ಕಟ್ಟೆಪೂಜೆಯ ಮುನ್ನ ಸಂಜೆ ಕಟ್ಟೆಯ ಬಳಿಯಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರಪಾಣಿ ನನ್ಯ ಅಚ್ಚುತ ಮೂಡೆತ್ತಾಯ ದೀಪ ಬೆಳಗಿಸಿ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು. ಮಾಣಿಯಡ್ಕ ದುರ್ಗಾವಾಹಿನಿ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು.

ಸಂಗೀತ ರಸಮಂಜರಿ:
ಪಂಚವಟಿನಗರದ ಪಂಚವಟಿ ಫ್ರೆಂಡ್ಸ್‌ನ ಆಶ್ರಯದಲ್ಲಿ ಸಪ್ತಸ್ವರ ಮ್ಯೂಸಿಕಲ್ ನೈಟ್ ಮಂಗಳೂರು ಇವರಿಂದ ಉಮೇಶ್ ಕೋಟ್ಯಾನ್ ವಾಮದಪದವು ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ-ಪಂಚವಟಿ ಸಂಭ್ರಮ ಮನರಂಜಿಸಿತು.

ಚಿತ್ರ: ಎನ್.ಎಸ್ ಕಾವು

ಸಾರ್ವಜನಿಕ ಕಟ್ಟೆ ಪೂಜೆ:
ಕಾವು ಶ್ರೀದೇವರ ಅಮ್ಚಿನಡ್ಕ ಪೇಟೆ ಸವಾರಿಯ ಸಂದರ್ಭದಲ್ಲಿ ಕಾವು ಪಂಚವಟಿನಗರದ ಸಾರ್ವಜನಿಕ ಕಟ್ಟೆಗೆ ಬಂದು ಕಟ್ಟೆ ಪೂಜೆ ನಡೆಯಿತು.

ವಿದ್ಯುದ್ದೀಪಗಳಿಂದ ಕಂಗೊಳಿಸಿದ ಪಂಚವಟಿನಗರ:
ಸಾರ್ವಜನಿಕ ಕಟ್ಟೆಪೂಜೆ ಮತ್ತು ಪಂಚವಟಿ ಸಂಭ್ರಮದ ಸಲುವಾಗಿ ಕಾವು ಪಂಚವಟಿ ನಗರದ ಸುತ್ತ ವಿದ್ಯುದ್ದೀಪ, ಕೇಸರಿ ಬಂಟಿಂಗ್ಸ್, ಕೇಸರಿ ಪತಾಕೆ, ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ನೆರೆದಿದ್ದ ಜನರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಪಂಚವಟಿ ಫ್ರೆಂಡ್ಸ್‌ನ ಸದಸ್ಯರುಗಳು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here