ಕಡಬ: ನಾಕೂರು ಗಯದಲ್ಲಿ ವಿದ್ಯಾರ್ಥಿ ಶವ ಪತ್ತೆ; ಆತ್ಮಹತ್ಯೆ ಶಂಕೆ, ಅಗ್ನಿಶಾಮಕದಳದಿಂದ ಕಾರ್ಯಾಚರಣೆ

0

ಪುತ್ತೂರು: ನಾಪತ್ತೆಯಾಗಿದ್ದ ವಿದ್ಯಾರ್ಥಿಯೋರ್ವರ ಶವ ಎಡಮಂಗಲ ಸಮೀಪದ ನಾಕೂರು ಗಯದಲ್ಲಿ ಮಾ.30ರಂದು ಪತ್ತೆಯಾಗಿದೆ. ಪುತ್ತೂರು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಶವ ಪತ್ತೆಹಚ್ಚಿದ್ದಾರೆ.

ಕೋಡಿಂಬಾಳ ಗ್ರಾಮದ ಗುಂಡಿಮಜಲು ನಿವಾಸಿ ಮಂಜುನಾಥ ಶೆಟ್ಟಿರವರ ಪುತ್ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಅದ್ವಿತ್ ಶೆಟ್ಟಿ ಮೃತಪಟ್ಟವರು ಎಂದು ತಿಳಿದು ಬಂದಿದ್ದು ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

ಅದ್ವಿತ್ ಶೆಟ್ಟಿ ಮಾ.29ರಂದು ಸಂಜೆಯಿಂದ ಕಾಣೆಯಾಗಿದ್ದರು. ನಾಕೂರು ಗಯದ ಬಳಿ ವಿದ್ಯಾರ್ಥಿಯ ಬ್ಯಾಗ ಪತ್ತೆಯಾಗಿದ್ದು. ಬಳಿಕ ಅಗ್ನಿಶಾಮಕ ದಳದರಿಗೆ ಮಾಹಿತಿ ನೀಡಿದ್ದರು.

ಮಾ.30ರಂದು ಬೆಳಿಗ್ಗೆಯಿಂದ ನದಿಯಲ್ಲಿ ಬೋಟ್ ಮೂಲಕ ಹುಟುಕಾಟ ಆರಂಭಿಸಿದ ಅಗ್ನಿಶಾಮಕದಳದವರು ಶವ ಪತ್ತೆಹಚ್ಚಿದ್ದಾರೆ. ಪುತ್ತೂರು ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಕುಮಾರ್ ಕೆ., ಅಗ್ನಿಶಾಮಕ ಅಧಿಕಾರಿ ಶಂಕರ್, ಅಗ್ನಿಶಾಮಕರಾದ ಅಬ್ದುಲ್ ಅಝೀಝ್, ಕೃಷ್ಣ ಜಾಲಿಬೇರ್, ಜಾಫರ್ ಅಹಮ್ಮದ್, ಚಾಲಕ ಮೋಹನ್ ಜಾಧವ್ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ, ಕಾಂಗ್ರೆಸ್ ಮುಖಂಡ ಫಝಲ್ ರಹೀಂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here