ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಅಸಿಸ್ಟೆಂಟ್ ಸೂಪರ್ ವೈಸರ್ ಗಣೇಶ್ ಪದ್ನಡ್ಕ ಸೇವಾ ನಿವೃತ್ತಿ

0

ಪುತ್ತೂರು: ಪ್ರತಿಷ್ಠಿತ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಅಸಿಸ್ಟೆಂಟ್ ಸೂಪರ್ ವೈಸರ್ ಗಣೇಶ್ ಪದ್ನಡ್ಕ ಅವರು ಮಾ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಕ್ಯಾಂಪ್ಕೋ ಚಾಕಲೇಟು ಪ್ಯಾಕ್ಟರಿಯಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿ, ಸುದೀರ್ಘ 37 ವರ್ಷಗಳ ಕರ್ತವ್ಯ ನಿರ್ವಹಿಸಿದ್ದ ಅವರು ಕೊಡಿಪ್ಪಾಡಿಯ ಪದ್ನಡ್ಕದ ನಿವಾಸಿಯಾಗಿದ್ದಾರೆ.

ದಿ.ರಾಮಣ್ಣ ಮತ್ತು ಚಂದ್ರಾವತಿ ದಂಪತಿ ಪುತ್ರರಾಗಿರುವ ಇವರು 1980ರಲ್ಲಿ ಶಾರದಾಂಬಾ ಇಂಜಿನಿಯರಿಂಗ್ ವರ್ಕ್ ನಲ್ಲಿ ಸೇವೆ ಸಲ್ಲಿಸಿದ್ದರು, 1981 ರಿಂದ 85 ರವರೆಗೆ ಕ್ಯಾಂಪ್ಕೋ ಮಹಮ್ಮಾಯಿ ದೇವಸ್ಥಾನದ ಬಳಿ ಸೇವೆ ಸಲ್ಲಿಸಿದ್ದಾರೆ. ನಂತರ 1985 ರಿಂದ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ಅಲ್ಲಿಂದ ಹಂತ ಹಂತವಾಗಿ ವಿವಿಧ ಹುದ್ದೆಯನ್ನು ಅಲಂಕರಿಸಿ ಪ್ರಸ್ತುತ ಅಸಿಸ್ಟೆಂಟ್ ಸೂಪರ್ ವೈಸರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಇವರು ಪತ್ನಿ ಜಯಶ್ರೀ ಪುತ್ರಿಯರಾದ ಡಾ.ಕೃಪಾಲಿ ಮತ್ತು ತೃನಾಲಿ ಜೊತೆ ಸಂಸಾರ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here