ಸವಣೂರು ಮುಗೇರು ಶ್ರೀ ವಿಷ್ಣುಮೂರ್ತಿ ದೇವಾಲಯದ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವ

0

ಪುತ್ತೂರು: ಸವಣೂರು ಗ್ರಾಮದ ಮುಗೇರು ಶ್ರೀ ವಿಷ್ಣುಮೂರ್ತಿ ದೇವಾಲಯದ 9 ನೇ ವರುಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾ.25 ಮತ್ತು 26 ರಂದು ಜರಗಿತು.

ಮಾ.25 ರಂದು ಬೆಳಿಗ್ಗೆ ಊರ ಭಕ್ತಾದಿಗಳಿಂದ ಹೊರೆ ಕಾಣಿಕೆ ಸಮರ್ಪಣೆ ಬಳಿಕ ಭಕ್ತಾದಿಗಳಿಂದ ಸ್ವಚ್ಚತೆ ಹಾಗೂ ಅಲಂಕಾರ ಸೇವೆ ನಡೆಯಿತು. ಸಂಜೆ ತಂತ್ರಿಗಳ ಅಗಮನ, ಸಾಮೂಹಿಕ ಪ್ರಾರ್ಥನೆ, ವಿವಿಧ ವೈದಿಕ ಕಾರ‍್ಯಕ್ರಮಗಳು ನಡೆದ ಬಳಿಕ ಅನ್ನಸಂತರ್ಪಣೆ ಜರಗಿತು.

ಮಾ.26 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬಿಂಬ ಶುದ್ದಿ, ಕಲಶಪೂಜೆ, ಮಧ್ಯಾಹ್ನ ಕಲಶಾಭಿಷೇಕ, ಸಕಲ ಪರಿವಾರ ದೇವರುಗಳ ವಾರ್ಷಿಕ ಪ್ರತಿಷ್ಠಾ ದಿನದ ಪೂಜೆ, ಕಲಶಾಭಿಷೇಕ, ದೈವಗಳಿಗೆ ವಾರ್ಷಿಕ ತಂಬಿಲ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ, ಸುಡುಮದ್ದು ಪ್ರದರ್ಶನ ಹಾಗೂ ಅನ್ನಸಂತರ್ಪಣೆ ನಡೆಯಿತು.

ದೇವಾಲಯದ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಕಾರ‍್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ, ಸದಸ್ಯರುಗಳಾದ ನವೀನ್ ಕುಮಾರ್ ಶೆಟ್ಟಿ ಮುಗೇರು, ಶಿವರಾಮ ಗೌಡ ಮೆದು, ರಾಕೇಶ್ ರೈ ಕೆಡೆಂಜಿ, ಆಶಾ ಪ್ರವೀಣ್ ಕಂಪ, ಮೋನಪ್ಪ ಗೌಡ ಆರೇಲ್ತಡಿ, ಪ್ರೇಮ ಪುಟ್ಟಣ್ಣ ನಾಯ್ಕ ಆರೇಲ್ತಡಿ, ದೇವಾಲಯದ ಪವಿತ್ರಪಾಣಿ ರತ್ನಾಕರ ಕುಂಜತ್ತಾಯ, ಅರ್ಚಕ ಪದ್ಮನಾಭ ಕುಂಜತ್ತಾಯ ಸೇರಿದಂತೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರುಗಳು, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಂದಾಳುಗಳು, ಊರ-ಪರವೂರ ಸಾವಿರಾರು ಮಂದಿ ಭಕ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here