ಅಕ್ಷಯ ಕಾಲೇಜಿನಿಂದ ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ಎನ್.ಎಸ್.ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

0

ಪುತ್ತೂರು: ನಾವು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜಮುಖಿಯಾಗಿ ವ್ಯವಹರಿಸಬೇಕು. ಇಂದು ನಾವು ಸಮಾಜದ ಯಾವುದೇ ಉನ್ನತ ಸ್ಥಾನದಲ್ಲಿ ಇದ್ದರೂ, ನಾವು ಸರ್ವರೊಡನೆ ಸಮಾನರಾಗಿ ಗೌರವದಿಂದ ಬದುಕುವುದನ್ನು ಎನ್.ಎಸ್.ಎಸ್. ಕಲಿಸಿಕೊಡುತ್ತದೆ ಎಂದು ವಿವೇಕಾನಂದ ಕಾಲೇಜು ಪುತ್ತೂರಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|ಅರುಣ್ ಪ್ರಕಾಶ್ ಅವರು ಹೇಳಿದರು.

ಅವರು ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಇದರ ಪ್ರಥಮ ಎನ್.ಎಸ್.ಎಸ್. ವಾರ್ಷಿಕ ಶಿಬಿರವನ್ನು ಎಣ್ಮೂರು ಸರಕಾರಿ ಪ್ರೌಢ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲುರವರು ಮಾತನಾಡಿ, ಎನ್.ಎಸ್.ಎಸ್. ಕಷ್ಟದ ಪರಿಸ್ಥಿತಿಯಲ್ಲೂ ಹೇಗೆ ಗಟ್ಟಿತನದಿಂದ ಇರಬಹುದು ಮತ್ತು ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದು ಎಂದು ತಮ್ಮ ಜೀವನಾನುಭವದ ಮೂಲಕ ತಿಳಿಸಿದರು.

ಸಮಾರಂಭದಲ್ಲಿ ಎಣ್ಮೂರು ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಮಿತ್ರಾ ಕೆ., ದೈಹಿಕ ಶಿಕ್ಷಣ ಶಿಕ್ಷಕರಾದ ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳು ಪ್ರಾರ್ಥಿಸಿದರು. ಶಿಬಿರಾಧಿಕಾರಿ ಮೇಘಶ್ರೀ ಸ್ವಾಗತಿಸಿ, ಘಟಕ ನಾಯಕ ಹಸ್ತಿಕ್ ವಂದಿಸಿದರು. ಯೋಜನಾಧಿಕಾರಿ ಕಿಶೋರ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ, ಘಟಕ ನಾಯಕಿ ವಿದ್ಯಾಶ್ರೀ ನಿರೂಪಿಸಿದರು.

ಮಾರ್ಚ್ 30ರಿಂದ ಎಪ್ರಿಲ್ 5ರವರೆಗೆ ಶಿಬಿರ ನಡೆಯಲಿದ್ದು, ಒಟ್ಟು 60 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here