ದೇಶ ವಿದೇಶದಲ್ಲಿನ ಸಿದ್ಧ ಉಡುಪುಗಳ ಪ್ರತಿಷ್ಠಿತ ಮಳಿಗೆ ಈಸಿ ಬೈ ಪುತ್ತೂರು ಜಿ.ಎಲ್.ವನ್ ಮಾಲ್‌ನಲ್ಲಿ ಶುಭಾರಂಭ

0

ಉದ್ಘಾಟನೆಯ ದಿನವೇ ಹಲವು ಆಫರ್‌ಗಳು. ರಿವಾರ್ಡ್ ಪಾಯಿಂಟ್‌ಗಳು

ಪುತ್ತೂರು: ದೇಶ ವಿದೇಶದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಟ್ರೆಡಿಷನಲ್ ಫ್ಯಾಷನ್ ಉಡುಪುಗಳ ಶ್ರೇಣಿಯ ಸಿದ್ದ ಉಡುಪುಗಳ ಪ್ರತಿಷ್ಟಿತ ಮಳಿಗೆ ’ಈಸಿ ಬೈ’ ಪುತ್ತೂರು ಜಿ.ಎಲ್.ವನ್ ಮಾಲ್‌ನಲ್ಲಿ ಮಾ.31ರಂದು ಶುಭಾರಂಭಗೊಂಡಿದೆ.

ಲೈಫ್‌ಸ್ಟೈಲ್, ಸ್ಪ್ಲಾಶ್, ಹೋಮ್ ಸೆಂಟರ್, ಮ್ಯಾಕ್ಸ್ ಮತ್ತು ಸ್ಪಾರ್‌ನಂತಹ ಹಲವು ಸಂಸ್ಥೆಗಳನ್ನು ಹೊಂದಿರುವ ದುಬೈ ಮೂಲದ ಅತಿ ದೊಡ್ಡ ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಅಡಿಯಲ್ಲಿರುವ ’ಈಸಿ ಬೈ’ ಮಳಿಗೆಯನ್ನು ಬಿಂದು ಸಮೂಹ ಸಂಸ್ಥೆಯ ಮಾಲಕ ಸತ್ಯಶಂಕರ್ ಭಟ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ.ಎಲ್.ಆಚಾರ್ಯ ಜ್ಯುವೆಲ್ಸ್‌ನ ಮಾಲಕ ಜಿ.ಎಲ್.ಬಲರಾಮ ಆಚಾರ್ಯ, ರಾಜಿ ಬಲರಾಮ ಆಚಾರ್ಯ, ರಂಜಿತಾ ಶಂಕರ್, ಸುಧನ್ವ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ವೇದಾ ಲಕ್ಷ್ಮೀಕಾಂತ್ ಆಚಾರ್ಯ, ಮೇಘನಾ ಸುಧನ್ವ ಆಚಾರ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪರಿವರ್ತನೆ ಆದಂತೆ ಅಭಿವೃದ್ಧಿ ಸಹಜ:
ಬಿಂದು ಸಮೂಹ ಸಂಸ್ಥೆ ಮಾಲಕ ಸತ್ಯಶಂಕರ್ ಭಟ್ ಅವರು ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಪರಿವರ್ತನೆ ಆದಂತೆ ಅಭಿವೃದ್ಧಿ ಸಹಜ ಎಂದರು. ಪ್ರಸ್ತುತ ದಿನದಲ್ಲಿ ಹಿಂದಿನ ಟೆಕ್‌ಟೈಲ್ಸ್ ಮಳಿಗೆಗಳು ಮತ್ತು ಇವತ್ತಿನ ಮಳಿಗೆಗಳನ್ನು ನೋಡಬೇಕು. ನಾವು ನಿಂತಲ್ಲೇ ನಿಲ್ಲದೆ ಪರಿವರ್ತನೆಯಾಗಿ ಮುಂದುವರಿಯಬೇಕು. ಅದಕ್ಕೆ ಉದಾಹರಣೆಯಾಗಿ ಈಸಿ ಬೈ ಮಳಿಗೆ ಗ್ರಾಹಕರಿಗೆ ತಕ್ಕುದಾದ ಬೆಲೆಯಲ್ಲೇ ಉತ್ತಮ ರೆಡಿಮೆಡ್ ಬಟ್ಟೆಗಳನ್ನು ನೀಡುತ್ತಿದೆ. ಇವತ್ತು ಪುತ್ತೂರು ಜಿ.ಎಲ್.ವನ್ ಮಾಲ್‌ನಲ್ಲಿ ಈ ಮಳಿಗೆ ಉದ್ಘಾಟನೆಯಾಗಿರುವುದು ಪುತ್ತೂರಿನ ಗ್ರಾಹಕರಿಗೆ ಅವಶ್ಯಕತೆಗಳನ್ನು ಪೂರೈಸಲಿದೆ ಎಂದರು.

ರಾಷ್ಟ್ರಮಟ್ಟದ ಬ್ರ್ಯಾಂಡ್ ಪುತ್ತೂರಿಗೆ ಬಂದಿರುವುದು ಹೆಮ್ಮೆಯ ವಿಚಾರ:
ಜಿ.ಎಲ್.ಆಚಾರ್ಯ ಜ್ಯುವೆಲ್ಸ್‌ನ ಮಾಲಕ ಜಿ.ಎಲ್.ಬಲರಾಮ ಆಚಾರ್ಯ ಅವರು ಮಾತನಾಡಿ ನಮ್ಮ ಮಾಲ್‌ಗೆ ರಾಷ್ಟ್ರಮಟ್ಟದ ಬ್ರ್ಯಾಂಡ್ ಮಳಿಗೆ ಬಂದಿರುವುದು ಹೆಮ್ಮೆಯ ವಿಚಾರ. ಎಲ್ಲಾ ರೀತಿಯ ಜನರಿಗೆ ಬೇಕಾದ ವಸ್ತ್ರಗಳು ಮತ್ತು ಉತ್ತಮ ದರದಲ್ಲಿ ಲಭ್ಯವಿರುವುದರಿಂದ ಸಂಸ್ಥೆ ಅಭಿವೃದ್ಧಿ ಹೊಂದಲಿದೆ ಎಂದರು.

ಪುತ್ತೂರಿನಲ್ಲಿ ನಮ್ಮ ಮೊದಲ ಮಳಿಗೆ, ಕರ್ನಾಟಕದಲ್ಲಿ 29ನೇ ಮಳಿಗೆ ಮತ್ತು ದೇಶದಲ್ಲಿ 139ನೇ ಮಳಿಗೆಯನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ. ಈಸಿ ಬೈ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಇನ್ನೂ ಮೌಲ್ಯವನ್ನು ಹುಡುಕುತ್ತಿರುವ ಭಾರತದ ಅತಿದೊಡ್ಡ ಗ್ರಾಹಕ ವಿಭಾಗವಾದ ’ನಿಯೋ ಇಂಡಿಯನ್ಸ್’ ಸೇವೆಗೆ ಸಿದ್ಧವಾಗಿದೆ. ಪುತ್ತೂರಿನಲ್ಲಿರುವ ನಮ್ಮ ಹೊಸ ಈಸಿ ಬೈ ಮಳಿಗೆಯು ಅಗತ್ಯಗಳನ್ನು ಪರಿಹರಿಸುವ ಮೂಲಕ ಸಂಪೂರ್ಣ ಕುಟುಂಬಕ್ಕೆ ರೂ. 69 ರಿಂದ ಪ್ರಾರಂಭವಾಗುವ ಅಂತ್ಯವಿಲ್ಲದ ನೋಟ ಮತ್ತು ಶೈಲಿಯ ಆಯ್ಕೆಗಳನ್ನು ನೀಡುತ್ತದೆ. ಪುತ್ತೂರಿನಲ್ಲಿ ನಮ್ಮ ವಿಸ್ತರಣೆಯ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಕರ್ನಾಟಕದಲ್ಲಿ ನಮ್ಮ ಅಸ್ತಿತ್ವವನ್ನು ಇನ್ನಷ್ಟು ಬಲಪಡಿಸಲು ಹೆಚ್ಚಿನ ಮಳಿಗೆಗಳನ್ನು ತೆರೆಯಲು ಎದುರು ನೋಡುತ್ತಿದ್ದೇವೆ. ಪುರುಷರ ಉಡುಪು, ಮಹಿಳಾ ಉಡುಪು, ಕಿಡ್ಸ್‌ವೇರ್, ಪಾದರಕ್ಷೆ ಮತ್ತು ಪರಿಕರಗಳನ್ನು ಒಳಗೊಂಡಿರುವ ವ್ಯಾಪಕ ಶ್ರೇಣಿಯ ಗುಣಮಟ್ಟದ ಉಡುಪುಗಳನ್ನು ಒದಗಿಸುತ್ತದೆ. ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಎಂಪಿಗಳಲ್ಲಿ 140 ಮಳಿಗೆಗಳನ್ನು ತೆರೆದಿದೆ, ಮೆಟ್ರೋ ಮತ್ತು ನಾನ್-ಮೆಟ್ರೋ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸುತ್ತಿದೆ.
ಆನಂದ್ ಅಯ್ಯರ್, ಮುಖ್ಯ ಕಾರ್ಯನಿರ್ವಾಹಕ ಈಸಿ ಬೈ

ಶುಭಾರಂಭದ ಹಲವು ಕೊಡುಗೆಗಳು
ಮಳಿಗೆಯಲ್ಲಿ ರೂ.1999 ರ ಖರೀದಿಗೆ ರೂ.2ಸಾವಿರ ಮೌಲ್ಯದ ಏರ್ ಡಫಲ್ ಬ್ಯಾಗ್ ಉಚಿತವಾಗಿದೆ. ಆದರೆ ಇದಕ್ಕೆ ಹೆಚ್ಚುವರಿ ಮೊತ್ತ ರೂ. 199 ಅನ್ನು ಪಾವತಿಸಬೇಕು ಹಾಗು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿ ಬಾರಿ ಶಾಪಿಂಗ್ ಮಾಡುವಾಗ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಕಾರ್ಡ್‌ಲೆಸ್ ಲಾಯಲ್ಟಿ ಪ್ರೋಗ್ರಾಂಗೆ ದಾಖಲಾಗಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here