ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ದೇವಿಕೃಪಾ ಮನೆಯಲ್ಲಿ ಶ್ರೀ ನಾಗ ಪ್ರತಿಷ್ಟೆ, ಶ್ರೀ ಸತ್ಯದೇವತೆ (ಕಲ್ಲುರ್ಟಿ) ಮತ್ತು ಮಂತ್ರದೇವತೆ ದೈವಗಳ ಪುನರ್ ಪ್ರತಿಷ್ಠೆ ಮತ್ತು ದೈವಗಳ ನರ್ತನ ಸೇವೆ ಏ. 2 ರಂದು ನಡೆಯಲಿದೆ.
ಏ.1 ರಂದು ರಾತ್ರಿ ಶ್ರೀದೇವಿಗೆ ದುರ್ಗಾಪೂಜೆ, ದೈವಸ್ಥಾನದಲ್ಲಿ ಸ್ವಸ್ತಿ ಪುಣ್ಯಾಹವಾಚನ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬ ಶುದ್ದಿ ನಡೆಯಲಿದೆ.
ಏ.2 ರಂದು ಬೆಳಿಗ್ಗೆ ಗಣಪತಿ ಹವನ, ನವಕ ಪ್ರಧಾನ ಹೋಮ, ಪ್ರತಿಷ್ಠಾ ಹೋಮ, 9.58 ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ನಾಗಪ್ರತಿಷ್ಟೆ, ಶ್ರೀ ಸತ್ಯದೇವತೆ, (ಕಲ್ಲುರ್ಟಿ) ಮತ್ತು ಮಂತ್ರ ದೇವತೆ ದೈವಗಳ ಪುನರ್ ಪ್ರತಿಷ್ಠೆ, ಕಲಶ ಅಭಿಷೇಕ, ಮಹಾಪೂಜೆ, ನಾಗತಂಬಿಲ, ಅನ್ನಸಂತರ್ಪಣೆ ನಡೆಯಲಿದೆ.
ಬೆಳಿಗ್ಗೆ ಗಂ. 10 ರಿಂದ ಶಿವ ದೇವರಿಗೆ ಮಂಜುಳಗಿರಿ ವೆಂಕಟ್ರಮಣ ಭಟ್ ರವರ ನೇತೃತ್ವದಲ್ಲಿ ಏಕಾದಶ ರುದ್ರಾಭಿಷೇಕ ನಡೆಯಲಿದೆ. ಬೆಳಿಗ್ಗೆ ಗಂ. 11 ರಿಂದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಹಾಗೂ ಮಧ್ಯಾಹ್ನ ಗಂ.12 ರಿಂದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಪರಿವಾರ ದೈವಗಳಿಗೆ ತಂಬಿಲ ನಡೆದು ರಾತ್ರಿ ಭಂಡಾರ ತೆಗೆದು ಪಡುಮಲೆ ಲಕ್ಷ್ಮೀನಾರಾಯಣ ರಾವ್ ಮತ್ತು ರಮಾದೇವಿ ಮಂಗಳೂರು ಇವರ ಸೇವಾರ್ಥವಾಗಿ ದೈವಗಳ ನರ್ತನ ಸೇವೆ ಜರಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಮಧೂರು ಶ್ರೀ ಕೃಷ್ಣ ರಾವ್ ಮತ್ತು ಬಳಗದಿಂದ ಸಂಗೀತ ಕಾರ್ಯಕ್ರಮ, ಸಂಜೆ ಬೆಟ್ಟಂಪಾಡಿ ಶೇಷನ್ ಪಾರ ಮತ್ತು ಶಿಷ್ಯರಿಂದ ಕುಣಿತ ಭಜನೆ, ರಾತ್ರಿ ಸವಿ ಸಂಗೀತ್ ಬಳಗ, ಪುತ್ತೂರು ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಬಿ. ವೆಂಕಟ್ರಾವ್ ಮತ್ತು ಸಹೋದರರು ತಿಳಿಸಿದ್ದಾರೆ.