ಮಂಗಳೂರು ಶ್ರೀ ವಿನಾಯಕ ಕಾಳಿಕಾಂಭ ದೇವಸ್ಥಾನಕ್ಕೆ ಪುತ್ತೂರಿನಿಂದ ಹೊರೆಕಾಣಿಕೆ

0

ಪುತ್ತೂರು: ಮಂಗಳೂರು ಶ್ರೀ ವಿನಾಯಕ ಕಾಳಿಕಾಂಭ ದೇವಸ್ಥಾನದ ವಾರ್ಷಿಕ ಯುಗಾದಿ ಜಾತ್ರಾ ಮಹೋತ್ಸವಕ್ಕಾಗಿ ಪುತ್ತೂರಿನಿಂದ ವಿಶ್ವಕರ್ಮ ಬಂಧುಗಳು ಹೊರೆಕಾಣಿಕೆಯನ್ನು ಸಮರ್ಪಣೆ ಮಾಡಿದರು.

ಬೊಳುವಾರು ವಿಶ್ವಕರ್ಮ ಸಭಾಭವನದಿಂದ ಹೊರಟ ಹೊರೆಕಾಣಿಕೆಯನ್ನು ಮಂಗಳೂರು ದೇವಸ್ಥಾನಕ್ಕೆ ಸಮರ್ಪಿಸಲಾಯಿತು.

ಮಂಗಳೂರು ಶ್ರೀ ಕಾಳಿಕಾಂಭ ವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ವಿ. ಪುರುಷೋತ್ತಮ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಪುತ್ತೂರು ವಲಯ ಸಂಚಾಲಕ ಜಗದೀಶ್ ಎಸ್.ಎನ್., ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ್ ಕೆ., ವಿಶ್ವಕರ್ಮ ಮಹಿಳಾ ಮಂಡಳಿ ಜತೆ ಕಾರ್ಯದರ್ಶಿ ಪ್ರಭಾ ಹರೀಶ್, ವಿಶ್ವಕರ್ಮ ಯುವ ಸಮಾಜದ ಮಾಜಿ ಅಧ್ಯಿಕ್ಷ ಸುರೇಶ್ ಆಚಾರ್ಯ ಕಾಣಿಯೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here