ಪಾಲ್ತಾಡಿ ಕಲ್ಲಕಟ್ಟ ಪ್ರದೇಶದಲ್ಲಿ ಮೂರು ವಾರಗಳಿಂದ ಕುಡಿಯುವ ನೀರಿನ ಸಮಸ್ಯೆ

0

ಸವಣೂರು : ಪಾಲ್ತಾಡಿ ಗ್ರಾಮದ ಕಲ್ಲಕಟ್ಟ ಭಾಗದಲ್ಲಿ ಕಳೆದ ಮೂರು ವಾರಗಳಿಂದ ಕುಡಿಯುವ ನೀರಿನ ಸರಬರಾಜು ಆಗದೇ ಜನತೆ ಸಂಕಷ್ಟದಲ್ಲಿ ಇದ್ದಾರೆ.

ಮಾ.18ರಂದು ಈ ಹಿಂದೆ ಇದ್ದ ಕೊಳವೆ ಬಾವಿಯಿಂದ ಪಂಪ್ ತೆಗೆದು ಹೊಸ ಕೊಳವೆ ಬಾವಿಗೆ ಅಳವಡಿಸಲಾಗಿದ್ದು, ಇದರಿಂದ ಕೆಲವು ಮನೆಗಳಿಗೆ ಮಾತ್ರ ನೀರು ಸರಬರಾಜಾಗುತ್ತಿದ್ದು,ಉಳಿದ ಮನೆಗಳಿಗೆ ನೀರು ಬಾರದೇ ಸಮಸ್ಯೆ ತಲೆದೋರಿದೆ.

ಸಮಸ್ಯೆ ಕುರಿತು ಜನಪ್ರತಿನಿಧಿಗಳು,ಗ್ರಾ.ಪಂ.ಗಮನಕ್ಕೂ ತಂದರೂ ಯಾವುದೇ ಫಲ ನೀಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here