ಚಿಕ್ಕಮುಡ್ನೂರು ವ್ಯಕ್ತಿ ನಾಪತ್ತೆ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಪುಳುವಾರು ಕೂಲಿ ಕಾರ್ಮಿಕರೊಬ್ಬರು ಕಳೆದ 16 ದಿನಗಳಿಂದ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


ಚಿಕ್ಕಮುಡ್ನೂರು ಗ್ರಾಮದ ಪುಳುವಾರು ಬಾಬು ಗೌಡ ಎಂಬವರ ಪುತ್ರ ಶಿವಪ್ಪ ಗೌಡ(49ವ)ರವರು ನಾಪತ್ತೆಯಾದವರು. ಅವರು ಮಾ.17 ರಂದು ಕೂಲಿ ಕೆಲಸಕ್ಕೆಂದು ಹೋದವರು ನಂತರ ಮನೆಗೆ ಹಿಂದಿರುಗಿಲ್ಲ. ಈ ಕುರಿತು ಅವರ ಸಹೋದರ ತಿಮ್ಮಪ್ಪ ಗೌಡ ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here