ಪುತ್ತೂರು: ಪುತ್ತೂರಿನ ಜಿಎಲ್ ವನ್ ಮಾಲ್ ನಲ್ಲಿ ಏಪ್ರಿಲ್ 1ರಂದು ಚೈನೀಸ್ & ಅರೇಬಿಯನ್ ಗ್ರಿಲ್ಡ್, ಜ್ಯೂಸ್ & ಶೇಕ್ಸ್ ಶುಭಾರಂಭಗೊಂಡಿತು.
ಮಾಲಕರ ಅಜ್ಜಿ ಪಿಯಾದ್ ಮಸ್ಕರೇನ್ಹಸ್ ಅವರು ಚೈನೀಸ್ & ಅರೇಬಿಯನ್ ಗ್ರಿಲ್ಡ್ ಸಂಸ್ಥೆಯನ್ನು ಮತ್ತು ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಜ್ಯೂಸ್ & ಶೇಕ್ಸ್ ಸಂಸ್ಥೆಯನ್ನು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು.
ನೂತನ ಸಂಸ್ಥೆಗೆ ಪವಿತ್ರ ಜಲ ಸಿಂಪಡಿಸಿ ಆಶೀರ್ವಚನಗೈದು ಮಾತನಾಡಿದ ಮಾಯಿದೆ ದೇವುಸ್ ಚರ್ಚ್ ಧರ್ಮಗುರು ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನಸ್, ಯುವ ಉದ್ಯಮಿ ಚೇತನ್ ರೊಡ್ರಿಗಸ್ ಅವರು ಹೊಸ ಉದ್ಯಮ ಆರಂಭಿಸಿದ್ದಾರೆ. ಅವರು ಯಾವ ಕನಸುಗಳನ್ನು ಇಟ್ಟುಕೊಂಡು ಗ್ರಿಲ್ಡ್, ಶೇಕ್ಸ್ & ಜ್ಯೂಸ್ ಸಂಸ್ಥೆಯನ್ನು ಆರಂಭಿಸಿದ್ದಾರೋ, ಅವರ ಎಲ್ಲಾ ಕನಸುಗಳು ನನಸಾಗಲಿ. ಅಗತ್ಯಗಳಾದ ತಿಂಡಿ ತಿನಿಸು, ಜ್ಯೂಸ್ ಜನರ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗಲಿ. ಸಮಾಜದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಜಿ.ಎಲ್. ವನ್ ಮಾಲ್ ನ ಛೇರ್ ಮೆನ್, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಮಾತನಾಡಿ, ಜನರ ಅಭಿರುಚಿಗೆ ತಕ್ಕಂತೆ ಗ್ರಿಲ್ಡ್, ಜ್ಯೂಸ್ & ಶೇಕ್ಸ್ ಉತ್ತಮ ರುಚಿಯನ್ನು ಉಣಬಡಿಸಲಿ. ಸಿನಿಮಾ ಥಿಯೇಟರಿಗೆ ಬರುವವರಿಗಷ್ಟೇ ಅಲ್ಲ, ಮಾಲ್ ಗೆ ಬರುವ ಪ್ರತಿಯೊಬ್ಬರನ್ನು ಈ ಸಂಸ್ಥೆ ಆಕರ್ಷಿಸುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.
ಫ್ಲವೀಯಾ ಅಲ್ಬುಕರ್ಕ್ ಕಾರ್ಯಕ್ರಮ ನಿರೂಪಿಸಿದರು.
ಜ್ಯೂಸ್ & ಶೇಕ್ಸ್ :
ಫ್ರೆಶ್ ಜೂಸ್ ಗಳಾದ, ಬಾದಾಮ್, ಮೊಜಿತೊ, ಚಿಕ್ಕು, ಪಂಚ್, ಮಾವು, ಚಾಕೊಲೇಟ್, ಕೋಲ್ಡ್ ಕಾಫಿ, ಸ್ಟ್ರಾಬೆರಿ, ಕಿತ್ತಳೆ, ಅನಾರ್, ಕಾಜು, ಡ್ರೈ ಫ್ರೂಟ್, ಬಟರ್‌ಸ್ಕಾಚ್, ಕಿತ್ತಳೆ, ಮಿಶ್ರಣ, ಕಾಕ್‌ಟೈಲ್, ಲಸ್ಸಿ, ಅನಾನಸ್ ಜ್ಯೂಸ್‌ಗಳು ಮತ್ತು ಶೇಕ್‌ಗಳ ವೈವಿಧ್ಯಮಯ ರುಚಿಯನ್ನು ಗ್ರಾಹಕರು ಇಲ್ಲಿ ಆಹ್ಲಾದಿಸಬಹುದು ಎಂದು ಸಂಸ್ಥೆಯ ಮ್ಹಾಲಕ ಜೀತನ್ ತಿಳಿಸಿದ್ದಾರೆ.
ಗ್ರಿಲ್ಡ್ :
ಚಿಕನ್ ಸಲಾಡ್, ಗ್ರಿಲ್ಡ್ ಚಿಕನ್ ಕಬಾಬ್ಸ್, ಬಿರಿಯಾನಿ, ಫ್ರೈಡ್ರೈಸ್, ನೂಡಲ್ಸ್ ನಂತಹ ಫಾಸ್ಡ್ ಫುಡ್ ಐಟಂಗಳು ದೊರೆಯಲಿದ್ದು, ನುರಿತ ಪಾಕ ತಜ್ಞರಿಂದ ಸ್ವಾದಿಷ್ಟಕರ ಫುಡ್ ಐಟಂಗಳು ಇಲ್ಲಿ ತಯಾರಾಗಲಿದೆ ಎಂದು ಸಂಸ್ಥೆಯ ಇನ್ನೋರ್ವ ಮ್ಹಾಲಕ ಜೇಸನ್ ತಿಳಿಸಿದ್ದಾರೆ.