ಬಡಗನ್ನೂರುಃ ಅಭಿವೃದ್ಧಿ ವಿಚಾರಧಾರೆಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರ ಮೂಲಕ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶಶಿಧರ ಭಟ್ ಕೆ ರವರ ಮನೆಯಲ್ಲಿ ಏ 1 ರಂದು ನಡೆದ ವಿಧಾನ ಸಭಾ ಚುನಾವಣಾ ಪ್ರಥಮ ಸುತ್ತಿನ ಪೂರ್ವಭಾವಿ ಸಭೆಯನ್ನದ್ದೇಶಿಸಿ ಮಾತನಾಡಿದರು.25 ವರ್ಷಗಳಲ್ಲಿ ಅಗದೆ ಇರುವ ಕೆಲಸ ಕಾರ್ಯಗಳನ್ನು ಭಾರತೀಯ ಜನತಾ ಪಕ್ಷ ಮಾಡಿದೆ. ರಸ್ತೆ ಅಭಿವೃದ್ಧಿ, ,ಜಲಜೀವನ ಯೋಜನೆಯಡಿ ಪ್ರತಿ ಮನೆ ಮನೆಗೆ ಕುಡಿಯುವ ನೀರು ವ್ಯವಸ್ಥೆ, ದೇಗುಲಗಳ ಅಭಿವೃದ್ಧಿ ಮಾಡಲಾಗಿದೆ. ಅಭಿವೃದ್ಧಿ ಜತೆಗೆ ದೂರದೃಷ್ಟಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅಭಿವೃದ್ಧಿಯಲ್ಲಿ ಬಡವ ಹಾಗೂ ಶ್ರೀಮಂತ ಎನ್ನದೆ ಎಲ್ಲರೂ ಸಮಾನವಾಗಿ ಸೌಲಭ್ಯಗಳನ್ನು ಒದಗಿಸಲಾಗಿದೆ.
3 ವರ್ಷ 10 ತಿಂಗಳಲ್ಲಿ ಅತ್ಯಾಮೋಘ ಅಭಿವೃದ್ಧಿ ಕೆಲಸ ಆಗಿದೆ. ಅದರಲ್ಲಿ ಸುಮಾರು ಒಂದುವರೆ ವರ್ಷ ಪ್ರಕೃತಿ ವಿಕೋಪ, ಹಾಗೂ ಕರೋನ ಹಿನ್ನೆಲೆಯಲ್ಲಿ ಅಭಿವೃದ್ಧಿ ಅಡ್ಡಿ ಉಂಟಾಗಿದೆ ಎಂದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು ಒಂದು ಸಾವಿರ ಐನೂರು ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಮಾಡಲಾಗಿದೆ.ಮೂಲ ಭೂತ ಸೌಕರ್ಯ ಯೋಜನೆಯಡಿ ಶಾಲಾ ಅಭಿವೃದ್ಧಿ ಸ್ಮಾರ್ಟ್ ಕ್ಲಾಸ್, ಜಲ ಸಿರಿ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆಗೆ ಪ್ರತಿ ಪಂಚಾಯತಿಗೆ 67 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.ಕೃಷಿಕರ ಹಿತದೃಷ್ಟಿಯಿಂದ ನೇತ್ರಾವತಿ ನದಿಗೆ ಡ್ಯಾಮ್ ನಿರ್ಮಾಣಕ್ಕೆ 350 ಕೋಟಿ ರೂಪಾಯಿ ಅನುದಾನ ಕ್ಯಾಬಿನೆಟ್ ಮಂಜೂರುಗೊಂಡು ಟೆಂಡರ್ ಹಂತದಲ್ಲಿದೆ . ಧಾರ್ಮಿಕತೆ ದೃಷ್ಟಿಯಿಂದ ದೇವಸ್ಥಾನ ,ದೈವಸ್ಥಾನ,ಭಜನಾ ಮಂದಿರಗಳನ್ನು ನವೀಕರಣ ಮತ್ತು ಮೂಲಸೌಕರ್ಯ ನಿಟ್ಟಿನಲ್ಲಿ ಅನುದಾನ ಒದಗಿಸಿ ಧಾರ್ಮಿಕ ಭಾವನೆಗೆ ಪೂರಕವಾಗಿ ಸ್ಪಂದಿಸಲಾಗಿದೆ.
ಪುತ್ತೂರು ಪ್ರಥಮ ಬಾರಿಗೆ ಏತ ನೀರಾವರಿ ಯೋಜನೆಯಡಿ ಕೃಷಿಕರಿಗೆ ಉಚಿತ ನೀರು ಕಲ್ಪಿಸಲಾಗಿದೆ. ಈ ಎಲ್ಲಾ ಅಭಿವೃದ್ಧಿ ವಿಚಾರಗಳನ್ನು ಮನೆಮನೆಗೆ ತಲುಸುವ ಕೆಲಸ ಕಾರ್ಯಗಳು ಕಾರ್ಯಕರ್ತರಿಂದ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬಿಜೆಪಿ ವಿಚಾರಧಾರೆ, ಅಭಿವೃದ್ಧಿ ಮತ್ತು ಹಿಂದುತ್ವ ಮೂಲಕ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಬೇಕು ಅಭ್ಯರ್ಥಿ ಅಯ್ಕೆ ಮೊದಲು ಪ್ರಥಮ ಸುತ್ತು ಪ್ರಚಾರ ಪೂರ್ಣಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ದಿನದ ನಾಲ್ಕು ತಾಸು ನಿರಂತರ ಕೆಲಸ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕರಾವಳಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಸಹ ಪ್ರಭಾರಿ ಜೀವಂಧರ ಜೈನ್, ಹಿಂದುಳಿದ ವರ್ಗಗಳ ಅಧ್ಯಕ್ಷ ಅರ್ ಸಿ ನಾರಾಯಣ ರೆಂಜ, ಗ್ರಾಮಾಂತರ ಮಂಡಲ ಕಾರ್ಯದರ್ಶಿ ಪುರುಷೋತ್ತಮ, ಅಪ್ಪಯ್ಯ ಮಣಿಯಾಣಿ, ಹರಿಪ್ರಸಾದ್ ಕುಲಾಲ್ ರಾಧಾಕೃಷ್ಣ ಬೋರ್ಕರ್ ವಿಜಯ ಕುಮಾರ್ ಕೊರಂಗ, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು .ಸಶಕ್ತಕೇಂದ್ರದ ಸಂಚಾಲಕ ಸಂತೋಷ್ ಅಳ್ವ ಗಿರಿಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಬ್ಬಯ್ಯ ರೈ ಹಲಸಿನಡಿ ವಂದಿಸಿದರು.