ಉಪ್ಪಿನಂಗಡಿ : ದೇಶದ ಉನ್ನತಿಗಾಗಿ ಶ್ರಮಿಸುವ ಇಚ್ಚಾಶಕ್ತಿಯನ್ನು ಮೂಡಿಸುವ ಸಲುವಾಗಿಯೇ ಸಂಘಟಿತ ಸಮಾಜ ರೂಪುಗೊಳ್ಳುವುದರ ಅಗತ್ಯತೆ ಇದೆ . ಸಮಯ ಕೊಡಲು ಸಾಧ್ಯವಿದ್ದವರು ಸಮಯವ ನೀಡಲಿ. ಧನ ಸಹಾಯ ನೀಡಲು ಸಾದ್ಯವಿದ್ದವರು ಧನ ಸಹಾಯವನ್ನಿತ್ತು ಸಮಾಜದ ಸದೃಢತೆಗೆ ಕೈ ಜೋಡಿಸಬೇಕೆಂದು ಉಜಿರೆಯ ಲಕ್ಷ್ಮಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ತಿಳಿಸಿದರು.
ಅವರು ಉಪ್ಪಿನಂಗಡಿಯಲ್ಲಿ ನಡೆದ ಪುತ್ತೂರು ತಾಲೂಕು ಸಪಲಿಗರ ಯಾನೆ ಗಾಣಿಗರ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪೊಲೀಸ್ ವೃತ್ತ ನಿರೀಕ್ಷಕ ಕೆ ಪ್ರಭಾಕರ ಬೆಳ್ತಂಗಡಿ ಮಾತನಾಡಿ , ಪ್ರಸಕ್ತ ಮೀಸಲಾತಿಯ ಬೇಡಿಕೆಗಾಗಿ ರಾಜ್ಯದ ವಿವಿಧ ಜಾತಿ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಮೀಸಲಾತಿಯ ಮಹತ್ವವನ್ನು ಅದರ ಮುಖಂಡರು ಅರಿತ್ತಿದ್ದು, ಅದಕ್ಕಾಗಿ ಅದರ ಹಿಂದೆ ಬಿದ್ದಿದ್ದಾರೆ. ಆದರೆ ಗಾಣಿಗ ಸಮಾಜ ಯಾವುದೇ ಬೇಡಿಕೆಯನ್ನು ಮುಂದಿರಿಸದೆ ಮೌನವಾಗಿದ್ದರೂ, ದೇಶಕ್ಕೆ ಮಹಾನ್ ನಾಯಕತ್ವವನ್ನು ನೀಡಿದ ಹೆಮ್ಮೆಯನ್ನು ಹೊಂದಿದೆ. ಇದರ ಹಿರಿಮೆಯನ್ನು ಮುಂದುವರೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪುತ್ತೂರು ತಾಲೂಕು ಸಪಲಿಗರ ಯಾನೆ ಗಾಣಿಗರ ಸಂಘದ ಅಧ್ಯಕ್ಷ ಹರಿರಾಮಚಂದ್ರ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ತಾಲೂಕು ಯುವ ಗಾಣಿಗ ಸಂಘದ ಅಧ್ಯಕ್ಷ ನಿತೀಶ್ ಗಾಣಿಗ ನೆಕ್ಕಿಲಾಡಿ , ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ ನೆಕ್ಕರೆ , ಪ್ರಧಾನ ಕಾರ್ಯದರ್ಶಿ ವಸಂತ ಕುಂಟಿನಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಶಸ್ವಿ ಯುವ ಉದ್ಯಮಿ, ಸಮಾಜ ಸೇವಕ, ಹೂವಿನ ವ್ಯಾಪರಸ್ಥರಾದ ರಮೇಶ್ ನಟ್ಟಿಬೈಲು ರವರನ್ನು ಗೌರವಿಸಲಾಯಿತು.
ಪ್ರಮುಖರಾದ ಬಿ ಕೆ ಆನಂದ, ರಾಮಣ್ಣ ಪುಷ್ಪಕುಂಜ, ಯು ರಾಧಾ, ಭಾಸ್ಕರ್ , ಮೋಹನ್ , ಚಂದ್ರ ಪುಲಮೊಗೆರು, ವಿಶ್ವನಾಥ್ ಟೈಲರ್, ನೇಮಣ್ಣ ನಟ್ಟಿಬೈಲು, ಜಯಶ್ರೀ ಜನಾರ್ಧನ್, ಪ್ರಕಾಶ್ ಗಾಣಿಗ, ಮಹೇಶ್ , ದೇವರಾಜ್, ನಾರಾಯಣ , ಅಕ್ಷಯ್ ಕುಮಾರ್, ಅನೀಶ್ ಗಾಣಿಗ, ವಿನೋದ್ ಕುಮಾರ್, ಕಿರಣ್ ಗಾಣಿಗ , ಸುನಿಲ್, ಉಮೇಶ್ ಅಮೀನ್, ಜಯಂತ ನಟ್ಟಿಬೈಲ್ , ಬಿ ಕೆ ಅರುಣ್, ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ನಿತೀಶ್ ಗಾಣಿಗ ಸ್ವಾಗತಿಸಿ,ಪ್ರಶಾಂತ್ ನೆಕ್ಕಿಲಾಡಿ ನಿರೂಪಿಸಿ, ಶಶಿಕಲಾ ಭಾಸ್ಕರ್ ವಂದಿಸಿದರು.
.