ಶಾಂತಿಗೋಡು ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ, ದರ್ಶನ ಬಲಿ, ದೈವಗಳ ನೇಮೋತ್ಸವ

0

ಪುತ್ತೂರು : ಶಾಂತಿಗೋಡು ಗ್ರಾಮದ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ವರ್ಷಾವಧಿ ಜಾತ್ರೋತ್ಸವವು ಎ.2 ಮತ್ತು 3 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಎ.2ರಂದು ಬೆಳಿಗ್ಗೆ ಶ್ರೀವಿಷ್ಣುಮೂರ್ತಿ ಭಜನಾ ಮಂದಿರದ ಬಳಿಯಿಂದ ಊರ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಎ.3ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿ ಹೋಮ, ಪಂಚವಿಂಶತಿ, ಕಲಶಪೂಜೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಮಹಾಪೂಜೆ, ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ, ರಾತ್ರಿ ಕ್ಷೇತ್ರದ ದೈವಗಳಾದ ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು.

ಎ.2ರಂದು ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಂತಿಗೋಡು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ವೈವಿಧ್ಯ, ಪುತ್ತೂರು ನೃತ್ಯೋಪಾಸನಾ ಕಲಾ ತಂಡದಿಂದ ನೃತ್ಯೋಹಂ ಕಾರ್ಯಕ್ರಮ ನಡೆಯಿತು. ಎ.3ರಂದು ಬೆಳಿಗ್ಗೆ ಮತ್ತು ರಾತ್ರಿ ಶಾಂತಿಗೋಡು ಶ್ರೀಮಹಾವಿಷ್ಣು ಭಜನಾ ಮಂಡಳಿ ಹಾಗೂ ಶ್ರೀದುರ್ಗಾ ಮಹಿಳಾ ಭಜನಾ ಮಂಡಳಿ ಕೂಡುರಸ್ತೆಯಿಂದ ಭಜನೆ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಶಾಂತಿಗೋಡು, ಸದಸ್ಯ ಹಾಗೂ ಅರ್ಚಕ ರಾಮಕೃಷ್ಣ ಬಳ್ಳಕ್ಕುರಾಯ, ಎಸ್.ಪಿ. ನಾರಾಯಣ ಗೌಡ ಪಾದೆ, ಎಸ್. ಕೃಷ್ಣ ವಿಷ್ಣುನಗರ, ವಿಶ್ವನಾಥ ಬಲ್ಯಾಯ ಮುಂಡೋಡಿ, ದೇವರಾಜ ಗೌಡ ಕಲ್ಕಾರು, ಕೂಸಪ್ಪ ನಾಯ್ಕ ಬಿರ್ಮನಕಜೆ, ನಾಗಮ್ಮ, ಬಾಲಕೃಷ್ಣ ಗೌಡ ತೋಟ, ಗೌರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಉತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಕೈಂದಾಡಿ, ಉಪಾಧ್ಯಕ್ಷ ರಾಮಕೃಷ್ಣ ಭಟ್ ಗುಮಡಿಬೈಲು, ಸುಬ್ರಹ್ಮಣ್ಯ ಹೆಬ್ಬಾರ್ ಸೇರಾಜೆ, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕೈಂದಾಡಿ, ಜತೆ ಕಾರ್ಯದರ್ಶಿ ವಿನೋದ್ ಸುವರ್ಣ ಕರ್ಪಿನಮೂಲೆ, ನಾರಾಯಣ ಪೂಜಾರಿ ಬೇರಿಕೆ, ವರುಣ್ ಓಲಾಡಿ, ಕೋಶಾಧಿಕಾರಿ ಬಾಲಕೃಷ್ಣ ಗೌಡ ತೋಟ, ಸಂಚಾಲಕ ನಾರಾಯಣ ಗೌಡ ಕೈಂದಾಡಿ, ಜತ್ತಪ್ಪ ಗೌಡ ಕೈಂದಾಡಿ, ನಾಗೇಶ್ ಸಾರಕರೆ, ವಿವಿಧ ಸಮಿತಿ ಸದಸ್ಯರು ಹಾಗೂ ಊರ, ಪರವೂರ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಭಾಗವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಾಂತಿಗೋಡು, ದುರ್ಗಾ ಮಹಿಳಾ ಭಜನಾ ಮಂಡಳಿ ಕೂಡುರಸ್ತೆ ಶಾಂತಿಗೋಡು, ಮಹಾವಿಷ್ಣು ಭಜನಾ ಮಂಡಳಿ ಶಾಂತಿಗೋಡು, ಗ್ರಾಮ ವಿಕಾಸ ಯೋಜನೆ ಶಾಂತಿಗೋಡು, ವಿಕ್ರಮ ಯುವಕ ಮಂಡಲ ಶಾಂತಿಗೋಡು ಸಹಕರಿಸಿದರು.

LEAVE A REPLY

Please enter your comment!
Please enter your name here