ಪುತ್ತೂರು: ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಸವಣೂರು ಸಮೀಪದ ಪುಣ್ಚಪ್ಪಾಡಿ ನೇರೋಳ್ತಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಪ್ರಶ್ನಾ ಚಿಂತನೆ ಎ. ೫ ರಂದು ದೈವಸ್ಥಾನದ ವಠಾರದಲ್ಲಿ ಜರಗಿತು.
ದೈವಜ್ಞರಾದ ಜ್ಯೋತಿಷ ಶಿರೋಮಣಿ ಎನ್ ಸ್ವಾಮಿನಾಥನ್ ಪಣಿಕ್ಕಾರ್ ಪುತ್ತೂರು ಇವರು ಪ್ರಶ್ನಾ ಚಿಂತನೆಯನ್ನು ನಡೆಸಿಕೊಟ್ಟರು.
ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ, ಸವಣೂರು ಗ್ರಾ.ಪಂ. ಸದಸ್ಯ ಬಾಬು ಎನ್ ಜರಿನಾರು, ಉಪಾಧ್ಯಕ್ಷ ನಾಗೇಶ್ ಒಡಂತಾರ್‍ಯ, ಕಾರ್‍ಯದರ್ಶಿ ದಕ್ಷಿತ್ ರಾಜ್, ಜತೆ ಕಾರ್‍ಯದರ್ಶಿ ಲೋಕೇಶ್ ಕನ್ಯಾಮಂಗಲ, ಕೋಶಾಧಿಕಾರಿ ಉಮೇಶ್, ಪದಾಧಿಕಾರಿಗಳಾದ ರವಿ ಕೆ, ಕಿಟ್ಟು ಕೆ, ದೀಪೇಶ್ ಕೆ, ಗಂಗಾಧರ್ ಕೆ, ಪ್ರದೀಪ್ ಎನ್.ಡಿ, ಶಿವಪ್ಪ ಡಿ, ಗಿರಿಜಾ ಕೆ, ಹೇಮಾವತಿ, ಹೇಮಲತಾ, ಸುರೇಶ್ ಸಿ, ಸಲಹಾ ಸಮಿತಿ ಸದಸ್ಯರುಗಳಾದ ಸವಣೂರು ಸಿ.ಎ, ಬ್ಯಾಂಕ್ ನಿರ್ದೇಶಕ ಸೋಮನಾಥ ಡಿ.ಕನ್ಯಾಮಂಗಲ, ನಾರಾಯಣ ಕನ್ಯಾಮಂಗಲ, ವಿಶ್ವನಾಥ ಕನ್ಯಾಮಮಗಲ, ಮಾಧವ ದೇವಸ್ಯ, ಕೊರಗಪ್ಪ ಎನ್.ನೆಕ್ಕರೆ, , ಅಣ್ಣು ನೆಕ್ಕಿ, ಬಾಳಪ್ಪ ಕನ್ಯಾಮಂಗಲ, ಬಾಬು ದೇವಸ್ಯ, ಕುಂಞ ಓಡಂತ್ತರ್‍ಯ, ಗುರುವ ದೇವಸ್ಯ, ಬಾಬು ಕುಮಾರಮಂಗಲ, ಬಾಬು ಕಾರೆತ್ತೋಡಿ ಕನ್ಯಾಮಂಗಲ, ಸುಂದರ ಕನ್ಯಾಮಂಗಲ, ಚಂದಪ್ಪ, ಬಾಬು ನೆಕ್ರಾಜೆ, ಊರ ಪ್ರಮುಖರಾದ ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷ ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ಬಾಲಕೃಷ್ಣ ರೈ ದೇವಸ್ಯ, ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು, ಪಿ.ಡಿ.ಗಂಗಾಧರ್ ರೈ ದೇವಸ್ಯ, ಹರೀಶ್ ತೋಟತ್ತಡ್ಕ, ವಿಶಾಖ್ ರೈ ತೋಟತ್ತಡ್ಕ, ಸಂತೋಷ್ ರೈ ಕಲಾಯಿ, ಲಿಂಗಪ್ಪ ರೈ ಚೆಂಬುತ್ತೋಡಿ, ಸುಶಾಂತ್ ರೈ ತೋಟತ್ತಡ್ಕ, ವಿಠಲ ಶೆಟ್ಟಿ ಕುಮಾರಮಂಗಲ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.