ರಂಜಾನ್‌ನಲ್ಲಿ ಸಮೋಸಕ್ಕೆ ಭಾರೀ ಬೇಡಿಕೆ…! ಗ್ರಾಮೀಣ ಭಾಗದಲ್ಲೂ ಭರ್ಜರಿ ಸೇಲ್

0

ಪುತ್ತೂರು: ಸಮೋಸ… ಇದು ಉಪವಾಸಿಗನನ್ನು ಆಕರ್ಷಿಸುವ ಒಂದು ಆಹಾರ. ರಂಝಾನ್ ತಿಂಗಳಲ್ಲಿ ಉಪವಾಸ ಬಿಟ್ಟ ಕೂಡಲೇ ಸಮೋಸ ಒಂದು ಬೇಕೇ ಬೇಕು.. ಇದು ಯಾವ ಮಟ್ಟಿಗೆ ಆಕರ್ಷಣೆ ಹೊಂದಿದೆ ಅಂದ್ರೆ ಇದನ್ನು ತಿನ್ನದೆ ಉಪವಾಸ ಬಿಡುವುದು ಹೇಗೆ ಎಂಬ ಹಂತಕ್ಕೂ ಬಂದು ತಲುಪಿದೆ. ಬಹುತೇಕ ಮಂದಿಯ ಫೇವರಿಟ್ ಫುಡ್‌ಗಳಲ್ಲಿ ಸಮೋಸವೂ ಒಂದು. ಇದರ ಈಗೀಗ ನಾನಾ ವೆರೈಟಿಗಳು ಬಂದಿದೆ. ವಜ್‌ ಸಮೋಸ, ಚಿಕನ್ ಸಮೋಸ, ವೆಜ್ ರೋಲ್, ಚಿಕನ್ ರೋಲ್ ಸೇರಿದಂತೆ ಐದಾರು ಬಗೆಯ ಐಟಂಗಳನ್ನು ನೂತನ ಸಮೋಸ ದಾರಿಗಳು ಮಾಡುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಕೇವಲ ಪಟ್ಟಣದಲ್ಲಿ ಮಾತ್ರ ದೊರೆಯುತ್ತಿದ್ದ ಸಮೋಸ ಗ್ರಾಮೀಣ ಭಾಗಕ್ಕೆ ತಲುಪಿರಲಿಲ್ಲ. ಸಮೋಸ ಬೇಕಾದರೆ ನಗರಕ್ಕೆ ಹೋಗಿ ಖರೀದಿ ಮಾಡಬೇಕಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಮಾಣಿ- ಮೈಸೂರು ರಾ. ಹೆದ್ದಾರಿಯ ಕುಂಬ್ರದಲ್ಲಿ ಮಾಮಾಸ್ ಕ್ಯಾಂಟೀನ್‌ನಲ್ಲಿ ಈ ಬಾರಿ ಭರ್ಜರಿ ಸಮೋಸ ವ್ಯಾಪಾರ ನಡೆಯುತ್ತಿದೆ. ಬೆಳಿಗ್ಗೆಯಿಂದ ಸಂಜೆ ತನಕ ಇಲ್ಲಿ ವಿವಿಧ ಸಮೋಸಗಳು ಸೇರಿದಂತೆ ಖಾಧ್ಯ ಪದಾರ್ಥಗಳು ಮಾರಾಟವಾಗುತ್ತಿದೆ.


3 ರೂಗೆ ಗ್ರಾಹಕನ ಕೈ ಸೇರುತ್ತಿದ್ದ ವೆಜ್ ಸಮೋಸ ದರ ಈಗ 7 ರೂಗೆ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ,ಅಡುಗೆ ಎಣ್ಣೆ, ಮತ್ತು ಅನಿಲದ ಬೆಲೆ ಏರಿಕೆಯಿಂದ ಈ ಬಾರಿ ಸಮೋಸ ದರವೂ ಏರಿಕೆಯಾಗಿದೆ. ಬೆಲೆ ಏರಿಕೆ ಇದ್ದ ಕಾರಣ ಬೇಡಿಕೆ ಕಮ್ಮಿಯಾಗಿದ್ದು ಕಳೆದ ಬಾರಿಯಷ್ಟು ವ್ಯಾಪಾರವಾಗುವುದು ಸಂಶಯ ಎಂದು ಹೇಳುತ್ತಾರೆ ಸಮೋಸ ವ್ಯಾಪಾರಿ ಸಾದಿಕ್ ಉಜಿರೋಡಿ.

ತುಂಬಾ ಕಷ್ಟದ ಕೆಲಸ
ಸಮೋಸ ಮಾಡುವುದು ತುಂಬಾ ಕಷ್ಟದ ಕೆಲಸವಾಗಿದೆ. ವೆಜ್ ಮತ್ತು ನಾನ್ ವೆಜ್ ಖಾಧ್ಯಗಳನ್ನು ಮೊದಲೇ ಬೇಯಿಸಿ ರೆಡಿಮಾಡಿಕೊಳ್ಳಬೇಕು. ಸಮೋಸ ಪಟ್ಟಿಯನ್ನು ಮಾಡಬೇಕು ಹೀಗೇ ತುಂಬಾ ಕಷ್ಟದ ಕೆಲಸವಾಗಿದೆ. ನಮ್ಮಲ್ಲಿ ಈ ಬಾರಿ ೪ ರಿಂದ ೫ ಸಾವಿರ ಸಮೋಸ ವ್ಯಾಪಾರವಾಗುತ್ತಿದೆ. ಗುಣಮಟ್ಟವನ್ನು ನೀಡಬೇಕು, ಎಣ್ಣೆಯನ್ನು ಬದಲಾಯಿಸುತ್ತಲೇ ಇರಬೇಕು. ಗ್ರಾಹಕರು ಈಗ ತುಂಬಾ ಚುರುಕಾಗಿದ್ದು ಸಮೋಸ ಮಾಡುವಲ್ಲಿಗೆ ಬಂದು ಎಣ್ಣೆಯನ್ನು ಪರಿಶೀಲಿಸುತ್ತಾರೆ. ಇದಕ್ಕಾಗಿ ನಾವು ಪ್ರತೀ ದಿನವೂ ಎಣ್ಣೆಯನ್ನು ಬದಲಾಯಿಸುತ್ತೇವೆ. ಉಪವಾಸ ಸಂದರ್ಬದಲ್ಲಿ ಸೇರಿದಂತೆ ಇತರೆ ದಿನಗಳಲ್ಲಿಯೂ ಉತ್ತಮವಾದ ಅಹಾರವನ್ನೇ ನೀಡಬೇಕು ಎಂಬುದು ನಮ್ಮ ಧರ್ಮ ಸಿದ್ದಾಂತವಾಗಿದೆ-ಅನ್ಸಾರ್ ಕಡ್ತಿಮಾರ್, ಸಮೋಸ ತಯಾರಕರು

LEAVE A REPLY

Please enter your comment!
Please enter your name here