ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಬರುವ ಸಾಲ್ಮರ-ಮುದ್ದೋಡಿ-ಜಿಡೆಕಲ್ಲು ರಸ್ತೆಯಲ್ಲಿ ಮುದ್ದೋಡಿ ಎಂಬಲ್ಲಿ ಇರುವ ಅವೈಜ್ಞಾನಿಕ ಹಂಪ್ಸ್‌ನಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಬಗ್ಗೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಪುತ್ತೂರು ನಗರಸಭೆಗೆ ಮನವಿ ಸಲ್ಲಿಸಲಾಗಿದೆ.
ಕೆಲವು ಸಮಯಗಳಿಂದ ಈ ರಸ್ತೆಯಲ್ಲಿ ಹಂಪ್ಸ್ ಅಳವಡಿಸಿದ್ದು ಇದರ ದುರಸ್ತಿಗೆ ಹಲವು ಬಾರಿ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಆದರೆ ಇದುವರೆಗೆ ಈ ಹಂಪ್ಸ್‌ನ್ನು ದುರಸ್ತಿ ಮಾಡಿಲ್ಲ. ಈ ಹಂಪ್ಸ್ ಅಪಘಾತಗಳಿಗೆ ಕೂಡ ಕಾರಣವಾಗಿದೆ.
ಆದುದರಿಂದ ಆದ್ಯತೆಯ ಮೇರೆಗೆ ಈ ಬಗ್ಗೆ ಗಮನಹರಿಸಿ ಸಂಚಾರ ಸಮಸ್ಯೆಯನ್ನು ಸುಗಮಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.