ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆ: ಶೇ.98.59 ಫಲಿತಾಂಶ : ದಕ್ಷಿಣ ಕನ್ನಡ ಜಿಲ್ಲೆಗೆ ಶೇ.98.91, ಹನ್ನೆರಡು ವಿದ್ಯಾರ್ಥಿಗಳು ಟಾಪ್ ಪ್ಲಸ್, ಸಪ್ಲಿಮೆಂಟರಿ, ಮರುಮೌಲ್ಯಮಾಪನಕ್ಕೆ ಅವಕಾಶ

0

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಮಾರ್ಚ್ ಮೊದಲ ವಾರದಲ್ಲಿ ನಡೆಸಿದ ಮದರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

ಐದು, ಏಳು, ಹತ್ತು, ಪ್ಲಸ್ ಟು ತರಗತಿಗಳಲ್ಲಿ ಭಾಗವಹಿಸಿದ ೨,೬೪,೪೭೦ ವಿದ್ಯಾರ್ಥಿಗಳಲ್ಲಿ ೨,೬೦,೭೪೧ ವಿದ್ಯಾರ್ಥಿಗಳು ಜಯ ಸಾಧಿಸಿದ್ದು ಶೇ.೯೮.೫೯ ಫಲಿತಾಂಶ ದಾಖಲಾಗಿದೆ. ಇದರಲ್ಲಿ ೩೪೪೮ ವಿದ್ಯಾರ್ಥಿಗಳು ಟಾಪ್ ಪ್ಲಸ್, ೪೦,೧೫೨ ಮಂದಿ ಡಿಸ್ಟಿಂಕ್ಷನ್, ೮೭,೪೪೭ ಫಸ್ಟ್ ಕ್ಲಾಸ್, ೪೪,೨೭೨ ಸೆಕೆಂಡ್ ಕ್ಲಾಸ್, ೮೫,೪೨೨ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕೇರಳ, ಕರ್ನಾಟಕ, ಪಾಂಡಿಚೇರಿ, ತಮಿಳುನಾಡು, ಅಂಡಮಾನ್, ಲಕ್ಷದೀಪ, ಯು.ಎ.ಇ, ಕತ್ತರ್, ಸೌದಿ ಅರೇಬಿಯಾ, ಬಹರೈನ್, ಒಮಾನ್, ಕುವೈತ್ ಮೊದಲಾದೆಡೆಯಾಗಿ ೭೫೮೨ ಕೇಂದ್ರಗಳಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ೧೦,೬೦೧ ಅಂಗೀಕೃತ ಮದರಸಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ದಕ್ಷಿಣ ಕನ್ನಡ ಜಿಲ್ಲೆಗೆ ಶೇ.98.91 ಫಲಿತಾಂಶ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ೯೦೮೮ ವಿದ್ಯಾರ್ಥಿಗಳ ಪೈಕಿ ೮೯೮೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.೯೮.೯೧ತೇರ್ಗಡೆ ಹೊಂದುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ 12 ಮಂದಿಗೆ ಟಾಪ್ ಪ್ಲಸ್:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೨ ಮಂದಿ ಟಾಪ್ ಪ್ಲಸ್ ಸ್ಥಾನವನ್ನು ಪಡೆದಿದ್ದಾರೆ. ಬೆಳ್ತಂಗಡಿ ರೇಂಜ್ ಪುಂಜಾಲಕಟ್ಟೆ ರೌಳತುಲ್ ಉಲೂಮ್ ಮದರಸದ ೫ನೇ ತರಗತಿಯ ಮುಹಮ್ಮದ್ ಅನೀಕ್, ಕಡಬ ರೇಂಜ್ ಸುರುಳಿ ಬುಸ್ತಾನುಲ್ ಉಲೂಮ್ ಮದರಸದ ೫ನೇ ತರಗತಿಯ ಮಿಸ್ಬ ಫಾತಿಮಾ, ಸುಳ್ಯ ರೇಂಜ್ ಅಡ್ಕ ಮುರ್ಶಿದು ತುಲ್ಲಾಬ್ ಮದರಸದ ೫ನೇ ತರಗತಿಯ ಆಯಿಷಾ ಫಹೀಮಾ, ಕಲ್ತಡ್ಕ ನೂರುಲ್ ಇಸ್ಲಾಂ ಮದರಸದ ೫ನೇ ತರಗತಿಯ ಆಯಿಷಾ ಆದಿಲಾ, ವಿಟ್ಲ ರೇಂಜ್ ನೀರಕಜೆ ನೂರುಲ್ ಇಸ್ಲಾಂ ಬ್ರಾಂಚ್ ಮದರಸದ ೭ನೇ ತರಗತಿಯ ಫಾತಿಮಾತ್ ಜಿಶಾನ, ಕಲ್ಲಡ್ಕ ರೇಂಜ್ ಕಲ್ಲಡ್ಕ ಮುನೀರುಲ್ ಇಸ್ಲಾಂ ಮದರಸದ ಮುಹಮ್ಮದ್ ಸಾಲಿಹ್, ಮಾಣಿ ರೇಂಜ್ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸದ ಫಾತಿಮಾ ಅಮಾನ, ಫಾತಿಮಾ ಸನಾ, ಶಝ ಫಾತಿಮಾ, ಉಪ್ಪಿನಂಗಡಿ ರೇಂಜ್ ಮಠ ಇರ್ತಡ್ಕ ಅಲ್ ಅಮೀನ್ ಮದರಸದ ಮಹಮ್ಮದ್ ಮುಝಮ್ಮಿಲ್, ಕುಂಬ್ರ ರೇಂಜ್ ಮಾಡನ್ನೂರ್ ನೂರುಲ್ ಇಸ್ಲಾಂ ಮದರಸದ ಫಾತಿಮಾ ಝುಹರ, ಕಾವು ನೂರುಲ್ ಇಸ್ಲಾಂ ಮದರಸದ ಫಾತಿಮತ್ ಮಿದ್ಹರವರು ಜಿಲ್ಲೆಯಲ್ಲಿ ಟಾಪ್ ಪ್ಲಸ್ ಪಡೆದಿದ್ದಾರೆ.

“ಸೇ” ಪರೀಕ್ಷೆ ಒಂದು ವಿಷಯದಲ್ಲಿ ಮಾತ್ರ ಅನುತ್ತೀರ್ಣರಾದವರಿಗೆ ಮೇ೭ ರಂದು ಬೆಳಿಗ್ಗೆ ೧೦ಗಂಟೆಗೆ ಆಯಾ ಡಿವಿಷನ್ ಕೇಂದ್ರಗಳಲ್ಲಿ ನಡೆಯುವ ಸಪ್ಲಿಮೆಂಟರಿ “ಸೇ”ಪರೀಕ್ಷೆಯಲ್ಲಿ ಭಾಗವಹಿಸಬಹುದು. www.samstha.info ವೆಬ್ಸೈಟಿನಲ್ಲಿ ಆನ್ಲೈನ್ ಆಗಿ ಏಪ್ರಿಲ್ ೮ ರಿಂದ ೧೮ರ ತನಕವಾಗಿ ೨೦೦ ರೂ ಶುಲ್ಕ ಪಾವತಿಸಿ ಇದಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ.

ಮರುಮೌಲ್ಯಮಾಪನ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅವಕಾಶವಿದ್ದು ಪ್ರತಿ ವಿಷಯವೊಂದಕ್ಕೆ ನೂರು ರೂ. ಶುಲ್ಕ ಪಾವತಿಸಿ ವೆಬ್‌ಸೈಟ್‌ನಲ್ಲಿ ಮದರಸಾ ಲಾಗಿನ್ ಮಾಡಿ ಮೇಲಿನ ದಿನಾಂಕದೆಡೆಯಲ್ಲಾಗಿ ಅರ್ಜಿ ಸಲ್ಲಿಸಬೇಕು.

ಫಲಿತಾಂಶ ಮತ್ತು ಸಂಪೂರ್ಣ ಮಾಹಿತಿಗಳು www.samastha.info ಹಾಗೂ http://result.samastha.info ವೆಬ್ ಸೈಟಿನಲ್ಲಿ ಲಭ್ಯವಿದೆಯೆಂದು ಸಮಸ್ತದ ಪರವಾಗಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here