ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಹರಿದು ಬಂದ ಹಸಿರುಕಾಣಿಕೆ

0

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.10ರಿಂದ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಎ.8ರಂದು ಹಸಿರು ಹೊರೆಕಾಣಿಕೆ ಸಮರ್ಪಣೆಯು ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಬೊಳುವಾರು ಮತ್ತು ದರ್ಬೆಯಿಂದ ಕೊಂಬು ಕಹಳೆಯೊಂದಿಗೆ ಚೆಂಡೆವಾದನ, ನೃತ್ಯ ಭಜನೆ, ಕಲ್ಕಡ್ಕದ ಗೊಂಬೆ ನೃತ್ಯ, ನಾಸಿಕ್ ಬ್ಯಾಂಡ್ ದೊಂದಿಗೆ ಹೊರಟ ಹಸಿರು ಹೊರೆಕಾಣಿಕೆ ಮೆರವಣಿಗೆ ದೇವಳದ ಬಳಿ ಜೊತೆಯಾಗಿ ವೈಭವದಿಂದ ನಡೆಯಿತು.


ಸಂಜೆ ವಿವಿಧ ಗ್ರಾಮ, ಸೀಮೆಗಳಿಂದ ನೂರಾರು ವಾಹನಗಳಲ್ಲಿ ಬಂದ ಹಸಿರುವಾಣಿಯು ದರ್ಬೆಯಲ್ಲಿ ಮತ್ತು ಬೊಳುವಾರಿನಲ್ಲಿ ಸೇರಿ ಅಲ್ಲಿಂದ ಏಕಕಾಲದಲ್ಲಿ ಹಸಿರು ಹೊರೆಕಾಣಿಕೆ ಮೆರವಣಿಗೆ ಆರಂಭಗೊಂಡಿತು. ದರ್ಬೆಯಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮತ್ತು ಬೊಳುವಾರು ಓಂ ಶ್ರೀ ಶಕ್ತಿ ಅಂಜನೇಯ ಮಂತ್ರಾಲಯದ ಬಳಿ ದೇವವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮತ್ತು ಹಾಲಿ ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಮಂದಿ ತೆಂಗಿನ ಕಾಯಿ ಒಡೆಯುವ ಮೂಲಕ ಹಸಿರುಹೊರೆಕಾಣಿಕೆ ಮೆರಣಿಗೆಗೆ ಚಾಲನೆ ನೀಡಿದರು.

ಎರಡೂ ಕಡೆಯಿಂದ ಬಂದ ಹಸಿರು ಹೊರೆಕಾಣಿಕೆ ಮೆರವಣಿಗೆ ದೇವಳದ ಬಳಿಯ ಪ್ರಧಾನ ಅಂಚೆ ಕಚೇರಿ ಬಳಿಯಿಂದ ಜೊತೆಯಾಗಿ ಸಾಗಿ ಬಂತು.ಬಳಿಕ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಸಹಿತ ಸಮಿತಿ ಸದಸ್ಯರು ಹಸಿರು ಹೊರೆಕಾಣಿಕೆಯನ್ನು ದೇವಳದ ಒಳಗೆ ತಂದು ಸತ್ಯಧರ್ಮ ನಡೆಯಲ್ಲಿ ಇಟ್ಟು ಪ್ರಾರ್ಥನೆ ಮಾಡಿ ಬಳಿಕ ಹೊರೆಕಾಣಿಕೆಯನ್ನು ಉಗ್ರಾಣಕ್ಕೆ ತಂದು ಅಲ್ಲಿ ಉಗ್ರಾಣ ಮುಹೂರ್ತ ನೆರವೇರಿಸುವ ಮೂಲಕ ಹೊರೆಕಾಣಿಕೆ ಸಮಾವೇಶಗೊಂಡಿತ್ತು.


ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ., ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ್ ಗೌಡ ಮತ್ತು ಪ್ರಧಾನ ಅರ್ಚಕರೂ ಆಗಿರುವ ವ್ಯವಸ್ಥಾಪನಾ ಸಮಿತಿ ಸದಸ್ಯ ವೇ.ಮೂ.ವಿ.ಎಸ್ ಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಜಾತ್ರೋತ್ಸವದ ವಿವಿಧ ಉಪಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ತಾರಾನಾಥ ರೈ, ಕೃಷ್ಣಪ್ರಸಾದ್ ಆಳ್ವ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಪುರಸಭಾಧ್ಯಕ್ಷರಾದ ರಾಜೇಶ್ ಬನ್ನೂರು, ಮಹಾಬಲ ರೈ ವಳತ್ತಡ್ಕ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು, ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷ ಮುರಳಿಕೃಷ್ಣ ಹಸಂತಡ್ಕ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ಗೆಜ್ಜೆಗಿರಿ ನಂದನ ಬಿತ್ತಿಲ್‌ನ ಜಯಂತ ನಡುಬೈಲು, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ನಯನಾ ರೈ, ಜಯಕುಮಾರ್ ರೈ, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಹರಿಪ್ರಸಾದ್ ಯಾದವ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಿತೀಶ್ ಕುಮಾರ್ ಶಾಂತಿವನ, ರಮೇಶ್ ರೈ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here