ಪುಣಚ ಮಹಿಷಮರ್ದಿನಿ ವರ್ಷಾವಧಿ ಜಾತ್ರೋತ್ಸವ : ದರ್ಶನ ಬಲಿ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 5 ದಿನಗಳ ಕಾಲ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ 2ನೇ ದಿನವಾದ ಎ.8ರಂದು ಬೆಳಗ್ಗೆ ದೀಪ ಬಲಿ, ದರ್ಶನ ಬಲಿ ನಡೆದು ರಾತ್ರಿ ಭೂತ ಬಲಿ ಉತ್ಸವ ನಡೆಯಿತು.


ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳ ಭಕ್ತಿ ರಸಮಂಜರಿ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು.


ಎ: 9ರಂದು ಬೆಳಿಗ್ಗೆ ದೀಪ ಬಲಿ, ದರ್ಶನ ಬಲಿ ನಡೆಯಿತು.

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ಹಾಸ್ಯಮಯ ಸಾಮಾಜಿಕ ನಾಟಕ “ನಂಕ್ ಏರುಲ್ಲೆರ್” ನಡೆಯಲಿದೆ.

LEAVE A REPLY

Please enter your comment!
Please enter your name here