ಕರ್ನಾಟಕ ಶಾಸ್ತ್ರೀಯ ಸಂಗೀತ- ಸೌಜನ್ಯ ಎಸ್‌ ಜೈನ್‌ ಡಿಸ್ಟಿಂಕ್ಷನ್‌

0

ಪುತ್ತೂರು : ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ 2022-23ನೇ ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್‌ ವಿಭಾಗದಲ್ಲಿ ಸೌಜನ್ಯ ಎಸ್‌ ಜೈನ್‌ ಶೇ.93.25 ಅಂಕಗಳಿಸಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.


ಇವರು ಪುತ್ತೂರು ಗಾನ ಸರಸ್ವತಿ ಸಂಗೀತಾ ಕಲಾ ಶಾಲೆ ವಿದ್ವಾನ್‌ ವೀಣಾರಾಘವೇಂದ್ರ ಇವರ ಶಿಷ್ಯೆ.
ಪುತ್ತೂರು ಸುಧಾನ ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ವಿಟ್ಲ ಅಳಕೆಮಜಲು ನಿವಾಸಿ ಶ್ರೀ ಮಂದರ ಜೈನ್‌ ಮತ್ತು ಅನುಪಮ ಜೈನ್‌ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here