ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ-ಶಕುಂತಲಾ ಶೆಟ್ಟಿ
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ತಿಂಗಳಿಗೆ 2,೦೦೦ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಬಿಪಿಲ್ ಕಾರ್ಡ್ ದಾರರಿಗೆ ಉಚಿತ 10 ಕೆಜಿ ಅಕ್ಕಿ ನೀಡುವ ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಬಗ್ಗೆ ಜನತೆಗೆ ತಿಳಿಸಬೇಕೆಂದು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಕಾರ್ಯಕರ್ತರಿಗೆ ಹೇಳಿದರು.
ಅವರು ನಗರ ಕಾಂಗ್ರೆಸ್ ವತಿಯಿಂದ ಪಡ್ನೂರು ಗ್ರಾಮದ ಪಡ್ಡಾಯೂರುನಲ್ಲಿ ಕಾಂಗ್ರೆಸ್ ಮುಖಂಡ ಲೋಕೇಶ್ ಪಡ್ಡಾಯೂರು ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮೋದಿಯವರ ಅಚ್ಚೇ ದಿನ ಅಂಬಾನಿ, ಅದಾನಿಯಂತಹ ಬಂಡವಾಳ ಶಾಹಿಗಳಿಗೆ ಮಾತ್ರ ಸೀಮಿತವಾಗಿದೆ, ಬಿಜೆಪಿಯವರ ಆಡಳಿತದಲ್ಲಿ ಜನ ಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದರು. ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಮಾತನಾಡಿ ಬಿಜೆಪಿ ಸರಕಾರದ ದುರಾಡಳಿತದಿಂದ ಜನರ ದಿನನಿತ್ಯ ಉಪ ಯೋಗಿಸುತ್ತಿರುವ ಅಗತ್ಯ ವಸ್ತುಗಳ ಬೆಳೆ ಗಗನಕ್ಕೇರಿದೆ, ಅಡುಗೆ ಗ್ಯಾಸ್ ಬೆಲೆ ರೂ.1100 ಆಗಿದೆ. ಕರೆಂಟ್ ಬಿಲ್‌ನ್ನು ವಿಪರೀತ ಏರಿಸಲಾಗಿದೆ. ಪ್ರತಿಯೊಬ್ಬನ ಕುಟುಂಬ ನಿರ್ವಹಣೆ ವೆಚ್ಚ ತಿಂಗಳಿಗೆ 4,5೦೦ ರೂಪಾಯಿಯಷ್ಟು ಏರಿಕೆಯಾಗಿದೆ, ಇದರಿಂದ ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ, ಬಡವರು ಬದುಕಬೇಕಿದ್ದರೆ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಕಿತ್ತೊಗೆಯುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ ಆಧಾರ್ ಕಾರ್ಡ್‌ನ್ನು ಪಾನ್ ಕಾರ್ಡ್‌ಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿ ಜನ ಸಾಮಾನ್ಯರಿಂದ 1,೦೦೦ ರೂಪಾಯಿ ದಂಡ ವಸೂಲಿ ಮಾಡುವುದರ ಮೂಲಕ ಮೋದಿ ಸರಕಾರ ಜನರಿಂದ ಹಣ ಲೂಟಿ ಮಾಡುತ್ತಿದೆ.
ಬ್ಯಾಂಕ್‌ಗಳಿಗೆ ತಮ್ಮ ಅಕೌಂಟ್‌ಗಳಿಗೆ ಹಣ ಹಾಕಿದರು, ಹಣವನ್ನು ತೆಗೆದರು ಸೇವಾ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಬಿಜೆಪಿ ಸರಕಾರ ಜನರಿಗೆ GST ತೆರಿಗೆ ವಿಧಿಸಿ ಹಣ ದೋಚುವ ಕೆಲಸ ಮಾಡುತ್ತಿದೆ. ಬಿಜೆಪಿಯವರ ಈ ರೀತಿಯ ಜನ ವಿರೋಧಿ ನೀತಿಯ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಬನ್ನೂರು ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ನಗರ ಕಾಂಗ್ರೆಸ್ ವಲಯ 1ರ ಉಸ್ತುವಾರಿ ರೋಷನ್ ರೈ ಬನ್ನೂರು, ಯಂಗ್ ಬ್ರಿಗೇಡ್ ಸೇವಾದಳದ ಜಿಲ್ಲಾಧ್ಯಕ್ಷ ರಂಜಿತ್ ಬಂಗೇರ, ನಗರ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ದಾಮೋದರ ಭಂಡಾರ್ಕರ್, ರಶೀದ್ ಮುರ, ಕಾರ್ಯದರ್ಶಿಗಳಾದ ಮಹೇಶ್ ಕಲ್ಲೇಗ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ಪ್ರದಾನ ಕಾರ್ಯದರ್ಶಿ ಕಲಾವಿದ ಕೃಷ್ಣಪ್ಪ, ಸ್ಥಳೀಯರಾದ ವಸಂತ ಗೌಡ ಪಡ್ಡಾಯೂರು, ದಾಮೋದರ ಗೌಡ ನೆಲಪ್ಪಾಲ, ಸತೀಶ್ ಗೌಡ ಮೂವಪ್ಪು, ರಾಮಚಂದ್ರ ಗೌಡ ಕಲ್ಲೇಗ, ರಾಜಕುಮಾರ್ ಪೂಜಾರಿ ಪಡ್ಡಾಯೂರು, ವಿಜಯಕುಮಾರ್ ನೆಲಪ್ಪಾಲ, ಶೇಖರ ಪೂಜಾರಿ ಪಡ್ಡಾಯೂರು, ಸತೀಶ್ ಪೂಜಾರಿ ಪಡ್ಡಾಯೂರು, ತೇಜರಾಜ್ ಪೂಜಾರಿ ಪಡ್ಡಾಯೂರು, ಜಯರಾಜ್ ಪೂಜಾರಿ ಪಡ್ಡಾಯೂರು, ಕೇಶವ ಪೂಜಾರಿ ಪಡ್ಡಾಯೂರು, ಹರೀಶ್ ಪೂಜಾರಿ ನೆಲಪ್ಪಾಲ, ಪ್ರಮೋದ್ ನಾಯ್ಕ್ ಮಾಲ್ತೊಟು, ಗೋಪಾಲ ನಾಯ್ಕ್ ಮಾಲ್ತೊಟು, ಶೇಖರ ಪಡ್ಡಾಯೂರು, ಸುರೇಂದ್ರ ಪಡ್ಡಾಯೂರು, ಮಂಜು ಪಡ್ಡಾಯೂರು, ಶ್ರೀಧರ ಭಂಡಾರಿ ಪಡ್ಡಾಯೂರು, ನಾರಾಯಣ ರೆಂಜಾಳ, ಪುರುಷೋತ್ತಮ ರೆಂಜಾಳ, ರಾಜೇಶ್ ಪಡ್ಡಾಯೂರು ಮೊದಲಾದವರು ಉಪಸ್ಥಿತರಿದ್ದರು. ಮುದ್ದು ಪಿ. ವಿದ್ಯಾನಗರ ಸ್ವಾಗತಿಸಿ, ವಂದಿಸಿದರು.