ಪುಣಚ ಮಹಿಷಮರ್ದಿನಿ ಜಾತ್ರೋತ್ಸವ- ದರ್ಶನ ಬಲಿ, ಬಟ್ಟಲು ಕಾಣಿಕೆ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 5 ದಿನಗಳ ಕಾಲ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ 4ನೇ ದಿನವಾದ ಎ: 10 ರಂದು ಬೆಳಗ್ಗೆ ದೀಪ ಬಲಿ, ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ನಡೆಯಿತು.ಆಡಳಿತ ಮಂಡಳಿ, ಊರ ಪರಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು( ಎ. 10)ದೇವಸ್ಥಾನದಲ್ಲಿ

ಇಂದು ದೇವಸ್ಥಾನದಲ್ಲಿ ರಾತ್ರಿ ಉತ್ಸವ ಬಲಿ, ದರ್ಶನ ಬಲಿ, ಬೆಡಿಕಟ್ಟೆ ಉತ್ಸವ, ಸಿಡಿಮದ್ದು ಪ್ರದರ್ಶನ, ಮೃಗ ಬೇಟೆ ಸವಾರಿ, ನಿತ್ಯಪೂಜೆ, ಶ್ರೀ ಭೂತ ಬಲಿ, ಶಯನ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೆಜ್ಜೆ ಪೂಜೆ, ಮತ್ತು ನೃತ್ಯ ಶಿಲ್ಪ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here