ಪುತ್ತೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ವಿಕಸನಗೊಳಿಸುವ ಉದ್ದೇಶದಿಂದ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ (CBSE) ಆವರಣದಲ್ಲಿ “ವರ್ಣಿಕಾ” ಬೇಸಿಗೆ ಶಿಬಿರವನ್ನು ಆಯೋಜಿಸಲಾಯಿತು.
ಎಪ್ರಿಲ್ 3ರಿಂದ 7ರ ವರೆಗೆ ನಡೆದ ಈ ಶಿಬಿರವನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆ ಉದ್ಘಾಟಿಸಿದರು,ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಶ ಸಿಂಧೂ ವಿ. ಜಿ ಹಾಗೂ ಸಂಪನ್ಮೂಲ ವ್ಯಕ್ತಿ ಬಕುಲಾ ಅವರ ಗೌರವ ಉಪಸ್ಥಿತರಿದ್ದರು.
ಶಿಬಿರದಲ್ಲಿ ಬಕುಲಾ ಅವರು ಪೇಪರ್ ಬಳಸಿ ಕರಕುಶಲ ಆಕೃತಿಗಳನ್ನು ತಯಾರಿಸುವ ರೀತಿ,ಸಂಪನ್ಮೂಲ ವ್ಯಕ್ತಿ ಪ್ರವೀಣ್ ವರ್ಣಕುಟೀರ ಬೆರಳು ಬೊಂಬೆ, ಕೈಬೊಂಬೆ ಮತ್ತು ಶಾಲೆಯ ಡ್ರಾಯಿಂಗ್ ಶಿಕ್ಷಕ ರಮೇಶ್ ಕೆ. ಪಿ ಮಣ್ಣಿನಲ್ಲಿ ಹಲವು ಮಾದರಿಗಳನ್ನು ತಯಾರು ಮಾಡುವ ಕಲೆಯನ್ನು , ಸಂಪನ್ಮೂಲ ವ್ಯಕ್ತಿ ನವೀನ್ ಅಡ್ಕಾರ್ ಮಕ್ಕಳಿಗೆ ಗೂಡುದೀಪ, ಮುಖವಾಡ ತಯಾರಿಯನ್ನು ನಾನಾ ದಿನಗಳಲ್ಲಿ ತಿಳಿಸಿಕೊಟ್ಟರು.
ಕೊನೆಯ ದಿನದಂದು ಬೇಸಿಗೆ ಶಿಬಿರದ ಅಂಗವಾಗಿ ಗೆಜ್ಜೆಗಿರಿ, ಹನುಮಗಿರಿ ಕ್ಷೇತ್ರದರ್ಶನ ಹಾಗೂ ಕೌಡಿಚ್ಚಾರ್ ನಲ್ಲಿ ಮಣ್ಣಿನ ಪಾತ್ರೆ ತಯಾರಿಯ ಘಟಕದ ವೀಕ್ಷಣೆಗೆ ಸಣ್ಣ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಮುಖ್ಯ ಸಂಯೋಜಕ ರಮೇಶ್ ಕೆ. ಪಿ, ಶಿಕ್ಷಕಿಯರಾದ ವಿನಯಾ ಪ್ರಭು, ಜ್ಯೋತಿ ಕುಮಾರಿ ಅವರ ಸಹಕಾರದೊಂದಿಗೆ ಬೇಸಿಗೆ ಶಿಬಿರ ಯಶಸ್ವಿಯಾಯಿತು.