ಇಂದ್ರಪ್ರಸ್ಥ ವಿದ್ಯಾಲಯದ ಸ್ಕೌಟ್ ಗೈಡ್ ವಿದ್ಯಾರ್ಥಿಗಳ ಬೇಸಿಗೆ ಹಾಗೂ ವಾರ್ಷಿಕ ಶಿಬಿರ

0

ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿಂನಗಡಿಯಲ್ಲಿ 2023 ಎಪ್ರಿಲ್ 1 ರಿಂದ ಸ್ಕೌಟ್ ಗೈಡ್ ಕ್ಲಬ್‌ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು.

ಶಾಲೆಯ ಮುಖ್ಯಗುರು ವೀಣಾ ಆರ್ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎ.6ರಂದು ಗೈಡ್ ಕ್ಯಾಪ್ಟನ್ ಪ್ರಫುಲ್ಲ ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸ್ಕೌಟ್ ಮತ್ತು ಗೈಡ್ ನ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ, ಅಂದಾಜು ಗಣನೆ, ಇತ್ಯಾದಿ ವಿಷಯಗಳ ಕುರಿತು ಪ್ರಾತ್ಯಕ್ಷಿತೆ ತರಬೇತಿ ನೀಡಿದರು. ಶಾಲಾ ಮುಖ್ಯ
ಗುರು ವೀಣಾ ಆರ್ ಪ್ರಸಾದ್ ವಿದ್ಯಾರ್ಥಿಗಳು ಸ್ಕೌಟ್ ಗೈಡ್‌ ನಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕೆಂದರು.


ಎ 8-9ರಂದು ವಾರ್ಷಿಕ ಶಿಬಿರವು ಶಾಲೆಯಲ್ಲಿ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡು ಉಪ್ಪಿನಂಗಡಿಯ ಸಮೀಪ ತಾಳ್ತಜೆ ಎಂಬಲ್ಲಿ ವಸಂತಕುಮಾರ್
ತಾಳ್ತಜೆ ಯವರ ಕೃಷಿ ಭೂಮಿಯಲ್ಲಿ ಶಿಬಿರವು ನಡೆಯಿತು. ‌

ವಿದ್ಯಾರ್ಥಿಗಳಿಗೆ ವಿವಿಧ ಹಣ್ಣುಗಳ ಗಿಡಗಳನ್ನು ಪರಿಚಯಿಸಿದರು. ಕೃಷಿ ಮತ್ತು ಉದ್ಯಮದಲ್ಲಿ ಅಭಿವೃದ್ಧಿ ಹೊಂದುವುದರ ಕುರಿತು ಮಾಹಿತಿ
ನೀಡಿದರು. ವಿವಿಧ ಮನರಂಜನೆಯ ಆಟಗಳ ಆಡಿಸುವುದರ ಜೊತೆಗೆ ಮಕ್ಕಳಿಗೆ ಮನರಂಜನೆ ನೀಡಲಾಯಿತು.ಸಂಜೆ ಶಾಲಾ ವಠಾರದಲ್ಲಿ ಪಂಚೇಂದ್ರಿಯಗಳಿಗೆ ಸಂಬಂಧ ಪಟ್ಟ ಆಟಗಳನ್ನು ಆಡಿದರು. ನಂತರ ಧ್ವಜಾವರೋಹಣ ಮಾಡಿ, ಶಿಬಿರದ ನಾಯಕ ಸದಾಶಿವ ಶಿವಗಿರಿ ಕಲ್ಲಡ್ಕ ಶಿಬಿರದ ನಾಯಕ ಮುಂದಿನ ಚಟುವಟಿಕೆಗಳ ಬಗ್ಗೆ
ಮಕ್ಕಳಿಗೆ ಮಾಹಿತಿ ನೀಡಿದರು.


ಎರಡು ಘಂಟೆಗಳ ಕಾಲ ಕೃಷ್ಣಪ್ಪ ಬಂಬಿಲ ರಂಗಕರ್ಮಿಯವರಿಂದ ಮಕ್ಕಳನ್ನು ಮನರಂಜಿಸಿದರು. ಎ.9ರಂದು ಯೋಗಾಸನ ಹಾಗು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಶಿಬಿರವು ಮುಕ್ತಾಯಗೊಂಡಿತು ಈ ಶಿಬಿರದಲ್ಲಿ ಸ್ಕೌಟ್ ಗೈಡ್ಸ್ ,ಕಬ್ಸ್ ಬುಲ್ ಬುಲ್ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here