ಪುತ್ತೂರು: ಕೆದಂಬಾಡಿ ಇದ್ಪಾಡಿ ಮಂಜಕೊಟ್ಯ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಎ. 14 ರಂದು ಕೊಡಂಕಿರಿ ದಿ.ಲಕ್ಷ್ಮೀ ನಾರಾಯಣ ರೈಯವರ ಸ್ಮರಣಾರ್ಥ ಅವರ ಪುತ್ರ ಡಿಂಬ್ರಿಗುತ್ತು ಕೊಡಂಕೀರಿ ಚಂದ್ರಹಾಸ ರೈರವರಿಂದ ತಂಬಿಲ ಸೇವೆ ನಡೆಯಿತು.
ದೈವಸ್ಥಾನದ ಯಜಮಾನ ನಿವೃತ್ತ ಡಿವೈಎಸ್ಪಿ ಮುಂಡಾಳಗುತ್ತು ಶಾಂತರಾಮ ರೈರವರ ಉಸ್ತುವಾರಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಮುಂಡಾಳಗುತ್ತು ಸುಧಾಕರ್ ರೈ ಮತ್ತು ಪದಾಧಿಕಾರಿಗಳು, ಊರವರು ಸೇರಿದಂತೆ ಸುಮಾರು 130 ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು. ಕುಂಬ್ರದ ದಂತ ವೈದ್ಯೆ ಡಾ.ಯಶ್ಮಿರವರು ಪ್ರತಿ ತಿಂಗಳು ನಡೆಯುವ ತಂಬಿಲ ಸೇವೆಗೆ ಸಿಹಿತಿಂಡಿಯನ್ನು ಕೊಡುಗೆಯಾಗಿ ನೀಡುತ್ತಾರೆ ಎಂದು ದೈವಸ್ಥಾನದ ಆಡಳಿತ ಸಮಿತಿಯವರು ತಿಳಿಸಿದ್ದಾರೆ.