ಕೊಂಡಾಡಿಕೊಪ್ಪ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರರ ಜನ್ಮದಿನಾಚರಣೆ

0

ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಜನ್ಮದಿನವನ್ನು ಆಚರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮೋಹನ ಕಮಿತ್ತಿಲುರವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಶಾಲಾ ಮುಖ್ಯಗುರು ಪ್ರೇಮಾ ಬಿ ಸಂವಿಧಾನ ಶಿಲ್ಪಿಯ ಗುಣಗಾನ ಮಾಡಿದರು.ಅಡುಗೆ ಸಿಬ್ಬಂದಿ ಜಾನಕಿ ಕಮಿತ್ತಿಲು ಉಪಸ್ಥಿತರಿದ್ದರು.ಸಹಶಿಕ್ಷಕ ಜಯಂತ್ ವೈ ಸ್ವಾಗತಿಸಿ, ಶಾಲಾ ನಾಯಕ ಸಾಕ್ಷಾತ್ ವೈ ಜೆ ವಂದಿಸಿದರು.ಶಾಲಾ ಉಪನಾಯಕಿ ನವ್ಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here