ಪುತ್ತೂರು:ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಎ.28ರಂದು ಜರುಗಲಿರುವ ವರ್ಷಾವಧಿ ನೇಮ ನಡಾವಳಿಗೆ ಗೊನೆ ಮುಹೂರ್ತವು ಎ.20ರಂದು ನೆರವೇರಿತು.
ದೈವಸ್ಥಾನದಲ್ಲಿ ಗಣಹೋಮ, ಕಲಶಪೂಜೆ, ಕಲಶಾಭಿಷೇಕಗಳು ನಡೆದ ಬಳಿಕ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಸಂಪ್ರದಾಯದಂತೆ ವಾದ್ಯದೊಂದಿಗೆ ಕಾಲು ದಾರಿಯಲ್ಲಿ ತೆರೆಳಿ ದೈವಸ್ಥಾನದ ಪ್ರಧಾನ ಅರ್ಚಕರಾಗಿರುವ ರವಿಚಂದ್ರ ನೆಲ್ಲಿತ್ತಾಯರವರ ತೋಟದಲ್ಲಿ ಗೊನೆ ಕಡಿಯಲಾಯಿತು. ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಸದಸ್ಯರಾದ ಅಶೋಕ್, ಭೋಜರಾಜ ಗೌಡ, ನಾರಾಯಣ ಪೂಜಾರಿ, ಮ್ಯಾನೇಜರ್ ಚಂದ್ರಶೇಖರ್ ದೈವಸ್ಥಾನದ ಪರಿಚಾರಕರು ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.