ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ

0

ಪುತ್ತೂರು:ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎ.22ರಂದು ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ನೆರವೇರಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಮಾತನಾಡಿ, ಪದ್ಮಶ್ರೀ ಪ್ರಶಸ್ತಿಯು ನನಗೆ ದೊರೆತಿರುವುದಲ್ಲ. ಅದು ರಾಜ್ಯಕ್ಕೆ ದೊರೆತ ಗೌರವ. ನಮ್ಮ ಜೀವನಕ್ಕೆ ವಿದ್ಯಾಭ್ಯಾಸವೇ ಮಾತ್ರವಲ್ಲ. ಕೃಷಿ ಬೆಳೆಸಬೇಕು. ನಾವು ಬದುಕುವುದರ ಜೊತೆಗೆ ಇತರ ಜೀವಿಗಳಿಗೂ ಬದುಕಲು ಬಿಡಬೇಕು. ನಮ್ಮ ಸಮುದಾಯದ ಸಂಪ್ರದಾಯ ವನ್ನು ಉಳಿಸಿ, ಸಂಘವನ್ನು ಬೆಳೆಸಬೇಕು. ದೇಶವನ್ನು ಉಳಿಸಬೇಕು ಎಂದರು.


ಬೆಂಗಳೂರು ಮರಾಟಿ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಮಜಕ್ಕಾರ್ ಮಾತನಾಡಿ, ಸಂಘಟನೆಯೇ ಸಮಾಜಕ್ಕೆ ಶಕ್ತಿ. ಇದಕ್ಕಾಗಿ ಸಮಾಜವನ್ನು ಒಗ್ಗೂಡಿಸುತ್ತಿರುವ ಸಂಘದ ಅಧ್ಯಕ್ಷರಿಗೆ ಶಕ್ತಿ ನೀಡಬೇಕು. ಸಮಾಜದ ಪ್ರತಿಯೊಬ್ಬರೂ ಆರ್ಥಿಕ ನೆರವು ನೀಡಿ ಸಂಘವನ್ನು ಬೆಳೆಸಬೇಕು. ಭವಿಷ್ಯದ ಬಗ್ಗೆ ಚಿಂತಿಸಿ ಸಂಘವು ಕಾರ್ಯನಿವಹಿಸಬೇಕು. ಸಕ್ರೀಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಆಚರಣೆ, ಭಾಷೆಯ ಬಗ್ಗೆ ಕೀಲರಿಮೆ ಬೇಡ. ಪ್ರೀತಿಯಿಂದ ಉಳಿಸಬೇಕು ಎಂದರು.


ಗಂಜಿಮಠ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಶೇಖರ ಕಡ್ತಲ ಮಾತನಾಡಿ, ಸಮಾಜದ ಸಮಸ್ಯೆಗಳ ಮರಾಟಿ ಸಂರಕ್ಷಣಾ ಸಮಿತಿಯು ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಸ್ಯೆಯಿಂದ ಪರಿಹಾರ ಪಡೆದುಕೊಂಡವರಿಂದ ಸಂಘಟನೆಯ ಮಹತ್ವದ ಬಗ್ಗೆ ಅರಿವಿದೆ. ಮರಾಟಿ ಸಮಾಜವು ಪ್ರಾಮಾಣಿಕತೆ, ಸತ್ಯ ನಿಷ್ಟೆಯಿಂದ ಬದುಕಿದವರು. ಶಿವಾಜಿ, ಅಂಬೇಡ್ಕರ್ ಆದರ್ಶ ಗಳನ್ನು ಅಳವಡಿಸಿಕೊಂಡವರು. ಅನ್ಯ ಸಂಸ್ಕೃತಿಯನ್ನು ಬಿಟ್ಟು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಮುನ್ನಡೆಯಬೇಕು ಎಂದರು.


ಪೆರ್ಲ ಶ್ರೀಶಾರದಾ ಮರಾಟಿ ಸಮಾಜ ಸೇವ ಸಂಘದ ಬಾಲಕೃಷ್ಣ ಬಾರೆಕ್ಕಾಡು ಮಾತನಾಡಿ, ಸಮಾಜ ಬಾಂಧವರಿಗೆ ನಮ್ಮ ಸಮಾಜದ ಭಾಷೆಯಾಗಿರುವ ಮರಾಟಿ ಭಾಷೆಯ ಮಹತ್ವವನ್ನು ತಿಳಿಯಬೇಕು. ನಮ್ಮ ಸಮಾಜ ಬಾಂಧವರಾದ ಅಮೈ ಮಹಾಲಿಂಗ ನಾಯ್ಕರವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದಲ್ಲದೆ ಪ್ರಧಾನಿ ಮೋದಿಯವರು ಮನ್‌ಕೀ ಬಾತ್‌ನಲ್ಲಿ ಮಹಾಲಿಂಗ ನಾಯ್ಕ ಹೆಸರು ಉಲ್ಲೇಖ ಮಾಡಿದ್ದು ಸಮಾಜದ ಗೌರವವನ್ನು ವೃದ್ಧಿಸಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ಮಾತನಾಡಿ, ಸಮಾಜದ ಸಮಸ್ಯೆಗಳಿಗೆ ಸೂಕ್ತ ಸ್ಪಂಧನೆ ನೀಡಿರುವ ಮರಾಟಿ ಸಂರಕ್ಷಣಾ ಸಮಿತಿ ಮೂಲೆ ಮೂಲೆಗಳಲ್ಲಿ ಮನೆ ಮಾತಾಗಿದೆ. ಯಾವುದೇ ಫಲಾಪೇಕ್ಷೇಗಳಿಲ್ಲದೆ ಕಡೆಗಳಲ್ಲಿ 17 ರಸ್ತೆಗಳನ್ನು ನಿರ್ಮಿಸಿಕೊಡಲಾಗಿದೆ. ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯವಾದಾಗ ಅಲ್ಲಿನ ಎಲ್ಲಾ ಹಗರಣಗಳನ್ನು ಬಯಲುಮಾಡವಲ್ಲಿ ಸಂಘಟನೆಯು ಯಶಸ್ವಿಯಾಗಿದ್ದು ಕೆಲವೇ ದಿನಗಲ್ಲಿ ಹಗರಣ ನಡೆಸಿದವರು ಜೈಲಿಗೆ ಹೋಗಲಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ಬಡ ಪ್ರೋಫೇಸರ್ ಅನ್ಯಾಯವಾದಾಗ ಹೋರಾಟ ನಡೆಸಲಾಗಿದೆ ಎಂದ ಅವರು ಸಂಘಟನೆ ಮೂಲಕ ಸಮಾಜದ ವಿದ್ಯಾವಂತ ನಿರುದ್ಯೋಗಿ ಯುವ ಜನತೆಗೆ ಸ್ವ ಉದ್ಯೋಗ ಕಲ್ಪಿಸಲು ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾರಂಭಿಸುವುದು, ವಿವಿಧ ಇಲಾಖೆಗಳ ಮೂಲಕ ಸಮಾಜ ಬಾಂಧವರಿಗೆ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಬೇಕಾದ ಮಾಹಿತಿಗಳನ್ನು ನೀಡುವುದು ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಲಾಗವುದು ಎಂದರು.


ಮೆಸ್ಕಾ ಪುತ್ತೂರಿನ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ನಾಯ್ಕ್, ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ ನಾಯ್ಕ ಸರಸ್ವತಿಮೂಲೆ, ಕಾಸರಗೋಡು ಗಡಿನಾಡು ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ, ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕರವರು ಮಾತನಾಡಿ ಸಂಘಟನೆಯ ಮಹತ್ವಗಳ ಬಗ್ಗೆ ವಿವರಿಸಿದರು.


ಸನ್ಮಾನ:
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕರವರಿಗೆ ವಿಶೇಷ ಸನ್ಮಾನ ಹಾಗೂ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸುಮಾರು ೫೦ಕ್ಕೂ ಅಧಿಕ ಮಂದಿ ಸಮಾಜ ಬಾಂಧವ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಸತ್ಯನಾರಾಯಣ ಪೂಜೆ:
ವಾರ್ಷಿಕ ಮಹಾಸಭೆಯ ಪ್ರಾರಂಭದಲ್ಲಿ ವೇ.ಮೂ ದಿನೇಶ್ ಮರಡಿತ್ತಾಯರವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.
ಗ್ರೀಷ್ಮಾ ಪಾಣಾಜೆ ಪ್ರಾರ್ಥಿಸಿದರು. ಅಶೋಕ್ ಬೊಳ್ಳಾಡಿ ಸ್ವಾಗತಿಸಿದರು. ಸಂಚಾಲಕ ಶ್ರೀಧರ ನಾಯ್ಕ ಮುಂಡೋವುಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ವಿಮಲ ವರದಿ ವಾಚಿಸಿದರು. ಜನಾರ್ದನ ದುರ್ಗಾ ಹಾಗೂ ಕರುಣಾಕರ ಮುಂಡೋವುಮೂಲೆ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳಾದ ಶಿವಪ್ಪ ನಾಯ್ಕ, ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ನಾಯ್ಕ, ಜತೆ ಕಾರ್ಯದರ್ಶಿ ಸೇಸಪ್ಪ ನಾಯ್ಕ, ಪುರಂದರ ನಾಯ್ಕ, ಸದಾಶಿವ ನಾಯ್ಕ, ಗೀತಾ ದೇವಸ್ಯ, ಆನಂದ ನಾಯ್ಕ, ಶ್ರೀಧರ ನಾಯ್ಕ, ರತ್ನಾವತಿ ಅತಿಥಿಗನ್ನು ತಾಂಬೂಲ ನೀಡಿ, ಶಾಲು ಹಾಕಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here