

ಪುತ್ತೂರು: ಪುತ್ತೂರು ಹೊರವಲಯದ ಮರೀಲ್ ನಲ್ಲಿ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಅಪಘಾತಕ್ಕೊಳಗಾಗಿದೆ. ಅದೇ ದಾರಿಯಲ್ಲಿ ಸಾಗುತ್ತಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ದಿವ್ಯಾಪ್ರಭಾ ಗೌಡ ಇದನ್ನು ಕಂಡು ತನ್ನ ಕಾರಿನಿಂದ ಇಳಿದು ಗಾಯಾಳುವಿಗೆ ಖುದ್ದು ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವ ಧರ್ಮ ಪಾಲನೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.