ಶಾಂತಿಮೊಗರು ಶ್ರೀ ಸುಬ್ರಹ್ಮಣ್ವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ

0

ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವವು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಏ 26ರಂದು ನಡೆಯಿತು.

ಬೆಳಿಗ್ಗೆ ಗಣಪತಿ ಹೋಮ, ಕಲಶಾಭಿಷೇಕ, ತಂಬಿಲಗಳು ನಡೆದು, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು, ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಅರ್ಚಕ ರಮಾನಂದ ಭಟ್, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಉಪಾಧ್ಯಕ್ಷ ವೆಂಕಟೇಶ್ ಭಟ್ ಕೊಯಕ್ಕುಡೆ, ಜತೆ ಕಾರ್ಯದರ್ಶಿ ಪದ್ಮನಾಭ ದೋಳ, ಸದಸ್ಯರಾದ ಮಹಾಲಿಂಗೇಶ್ವರ ಶರ್ಮ, ನಿಟ್ಟೋನಿ ಕೆಡೆಂಜಿ, ಬಾಲಕೃಷ್ಣ ಗೌಡ ನೂಜಿ, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಬರೆಪ್ಪಾಡಿ, ಡಾ. ಸುಬ್ರಹ್ಮಣ್ಯ ಭಟ್ ಬರೆಪ್ಪಾಡಿ, ಸತ್ಯನಾರಾಯಣ ಗೌಡ ಕೊಡಿಯೇಲುಮೂಲೆ, ವಿಠಲ ಗೌಡ ಕಾಪೆಜಾಲು, ಪುಷ್ಪಲತಾ ಬರೆಪ್ಪಾಡಿ, ದೇವಪ್ಪ ಗೌಡ ನಡುಮನೆ, ಸೋಮಪ್ಪ ಗೌಡ ಅನ್ಯಾಡಿ, ಸುಬ್ರಾಯ ಗೌಡ ಕೆರೆನಾರು, ಯತೀಶ್ ನಡುಮನೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here