ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು, ಪುತ್ತೂರು, ವಾರ್ಷಿಕ ವಿಶೇಷ ಶಿಬಿರ 2022-23 ಇದರ ಉದ್ಘಾಟನಾ ಕಾರ್ಯಕ್ರಮ ಎ.22 ರಂದು ನಡೆಯಿತು. ಕಾರ್ಯಕ್ರಮವನ್ನು ಯು.ಜಿ. ರಾಧ, ಆಡಳಿತ ಮೊಕ್ತೇಸಾರರು ಶ್ರೀ ಮಹಾವಿಷ್ಣು ದೇವಾಸ್ಥಾನ ಶಾಂತಿನಗರ ಇವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಯು.ಜಿ.ರಾಧ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ರಾಷ್ಟ್ರೀಯ ಸೇವಾ ಯೋಜನೆಯು, ವಿದ್ಯಾರ್ಥಿಗಳು ಇನ್ನಷ್ಟು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಈ ಶಾಲೆಗೆ ಒಂದು ವಾರದ ಶಿಬಿರದಲ್ಲಿ ಪಾಲ್ಗೊಳ್ಳಲು ಬಂದ ತಾವೆಲ್ಲರೂ ಅತ್ಯುತ್ತಮ ಜೀವನ ಪಾಠಗಳನ್ನು ಕಲಿತು ಹೋಗಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಕಾಲೇಜು ಜಿಡೆಕಲ್ಲಿನ ಪ್ರಾಂಶುಪಾಲರಾದ ಪ್ರೊ.ಅಪ್ಪು ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಡೆಕಲ್ಲು ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಮಿತಾ ಪೈ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್, ಸರಕಾರಿ ಪ್ರೌಢಶಾಲೆ ಶಾಂತಿನಗರದ ಮುಖ್ಯಗುರು ವಿಷ್ಣುಪ್ರಸಾದ್, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಬಾಲಚಂದ್ರ.ಎ ಉಪಸ್ಥಿತರಿದ್ದರು.ಸಹ ಶಿಬಿರಾಧಿಕಾರಿ ಕೇಶವ ಪ್ರಾಸ್ತಾವಿಕ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿಯಾದ ಸುಜಾತಾ ಪಿ.ಎಸ್ ಸ್ವಾಗತಿಸಿ, ಪ್ರಸಕ್ತ ರೈ ನಿರೂಪಿಸಿ, ಎನ್ ಎಸ್ ಎಸ್ ಗೀತೆಯನ್ನು ಪ್ರೀತಿನಿಶಿ, ಶ್ರೀಕೃಪಾ, ಹರ್ಷಿತಾ ಪ್ರಾರ್ಥಿಸಿದರು. ಪ್ರಥಮ ಬಿ ಎ ಯ ವಿಖ್ಯಾತ್ ವಂದಿಸಿದರು.