ಕೆಯ್ಯೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ.) ಮಜ್ಜಾರಡ್ಕ ಮತ್ತು ಕರ್ನಾಟಕ ಬ್ಯಾಂಕ್ ಕೆಯ್ಯೂರು ಇದರ ಸಹಯೋಗದಲ್ಲಿ ಪಲಾನುಭವಿಗೆ ವಿಮೆ ಚೆಕ್ ವಿತರಣೆ ಹಾಗೂ ಬ್ಯಾಂಕಿನ ವಿವಿಧ ವಿಮೆ ಸೌಲಭ್ಯದ ಮಾಹಿತಿ ಮತ್ತು ವಿಷ್ಣು ಯುವಶಕ್ತಿ ಸಂಘಟನೆ ಸದಸ್ಯರಿಗೆ ತುರ್ತು ಸಹಾಯ ನಿಧಿಯಿಂದ ಚೆಕ್ ವಿತರಣೆಯು ಮಜ್ಜಾರಡ್ಕ ಶ್ರೀ ವಿಷ್ಣು ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿ, ಚೀಪ್ ಮ್ಯಾನೇಜರ್ ಕರ್ನಾಟಕ ಬ್ಯಾಂಕ್ ವಹಿಸಿದ್ದರು. ವಿಮೆ ಸೌಲಭ್ಯದ ವಿವಿಧ ಮಾಹಿತಿಯನ್ನು ಕೆಯ್ಯೂರು ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಸುಬ್ರಮಣ್ಯ ಹಾಗೂ ಬ್ಯಾಂಕ್ ಆಫೀಸರ್ ಕರಿಯಮ್ಮ ವಿವರಿಸಿದರು. ನಂತರ ಕರ್ನಾಟಕ ಬ್ಯಾಂಕ್ KBL ಸುರಕ್ಷಾ (ವರ್ಷಕ್ಕೆ ಕೇವಲ 360 ರೂಪಾಯಿ)ವಿಮೆಯ ಪಾಲಿಸಿದಾರ ಇತ್ತೀಚೆಗೆ ಅಪಘಾತದಲ್ಲಿ ನಿಧಾನರಾದ ಮಜ್ಜಾರಡ್ಕ ಸಂಘಟನೆ ಸದಸ್ಯ ದಿ l ಜಗದೀಶ್ ಪೂಜಾರಿ ಕೋಡಿಯಡ್ಕ ಇವರ ತಾಯಿ ಸುಶೀಲ ಕೋಡಿಯಡ್ಕ ಇವರಿಗೆ 10 ಲಕ್ಷದ ಚೆಕ್ ವಿತರಿಸಲಾಯಿತು.
ಮಜ್ಜಾರಡ್ಕ ಸಂಘಟನೆ ವತಿಯಿಂದ ತುರ್ತು ಸಹಾಯ ನಿಧಿಯಿಂದ ಸಂಘಟನೆ ಸದಸ್ಯ ಚೇತನ್ ಕೊಡಿಮರ, ಹಾಗೂ ಕೋಡಿಯಡ್ಕ ಶ್ರೀ ಚಾಮುಂಡೇಶ್ವರಿ ದೇವಿಯ ಕ್ಷೇತ್ರದ ಮೇಲಚ್ಚಾವಣಿಗೆ ಕೆಲಸ ಕಾರ್ಯಕ್ಕೆ ಸಂಘಟನೆ ವತಿಯಿಂದ ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಇದರ ಪ್ರದಾನ ಕಾರ್ಯದರ್ಶಿ ಶ್ರೀ ಸಾರ್ಥಕ್ ರೈ ಪಯಂದೂರು ಇವರು ಚೆಕ್ ವಿತರಣೆ ಮಾಡಿದರು. ವೇದಿಕೆಯಲ್ಲಿ ಬಜಾಜ್ ಲೈಫ್ ಇನ್ಸೂರೆನ್ಸ್ ಇದರ ಪ್ರತಿನಿಧಿ ಮಮತಾ, ಶ್ರೀ ವಿಷ್ಣು ಯುವಶಕ್ತಿ ಬಳಗದ ಪ್ರದಾನ ಕಾರ್ಯದರ್ಶಿ ಯತೀಶ್ ನಾಯ್ಕ ಕಠಾರ ಉಪಸ್ಥಿತರಿದ್ದರು.

ಚಂದ್ರಿಕಾ ಎಂಡೆಸಾಗು ಪ್ರಾರ್ಥಿಸಿದರು. ರಾಜ್ಯ ಸಂಗೊಳ್ಳಿ ರಾಯಣ್ಣ ಯುವ ಪ್ರಶಸ್ತಿ ಪುರಸ್ಕೃತ, ಮಯೂರ ರಾಜೇಶ್ ಕೆ ನಿರೂಪಿಸಿದರು. ಸಂಘಟನೆ ಉಪಾಧ್ಯಕ್ಷ ಸಮಿತ್ ಮಜ್ಜಾರ್ ಹಾಗೂ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರು. ಲಘು ಉಪಹಾರದ ವ್ಯವಸ್ಥೆಯನ್ನು ಸಂಘಟನೆ ಮಾಜಿ ಅಧ್ಯಕ್ಷ ಉದಯ ಸ್ವಾಮಿನಗರ ಮಾಡಿದ್ದರು.