ಆರ್ಯಭಟ ಪ್ರಶಸ್ತಿಗೆ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ||ವೈ.ಉಮಾನಾಥ ಶೆಣೈರವರು ಆಯ್ಕೆ

0

ಪುತ್ತೂರು: ಇಂಟರ್‌ನ್ಯಾಷನಲ್ ಆರ್ಯಭಟ ಕಲ್ಚರಲ್ ಫೌಂಡೇಶನ್ ನೀಡುವ ಆರ್ಯಭಟ ಪ್ರಶಸ್ತಿಗೆ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ||ವೈ.ಉಮಾನಾಥ ಶೆಣೈರವರು ಆಯ್ಕೆಯಾಗಿದ್ದಾರೆ. ಇವರ ಸಾಹಿತ್ಯ ಹಾಗೂ ಸಂಶೋಧನಾ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಮೇ.25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಶೋಧನೆ, ಬರವಣಿಗೆ ಹಾಗೂ ಪ್ರಾಚೀನ ಶಾಸನಗಳ ಅಧ್ಯಯನದಲ್ಲಿ ತೊಡಗಿರುವ ಡಾ||ಶೆಣೈರವರು ಸುಮಾರು 300ಕ್ಕೂ ಹೆಚ್ಚು ಪ್ರಾಚೀನ ಶಿಲಾಶಾಸನ ಹಾಗೂ ತಾಮ್ರಶಾಸನಗಳನ್ನು ಬೆಳಕಿಗೆ ತಂದಿದ್ದಾರೆ. ಇವರು ಒಟ್ಟು 23ಪುಸ್ತಕಗಳನ್ನು ರಚಿಸಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾಗಿರುವ ಇವರು ಮುರ ರಾಮನಗರ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here