ಪುತ್ತೂರು: ಕಾವುನಲ್ಲಿ ನಿರ್ಮಾಣಗೊಂಡ ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣ ಆಳ್ವ ಕಾಂಪ್ಲೆಕ್ಸ್ ಮೇ.3 ರಂದು ಶುಭಾರಂಭಗೊಳ್ಳಲಿದೆ. ಕಳೆದ 20 ವರ್ಷಗಳಿಂದ ಜಿನಸು ಅಂಗಡಿ ವ್ಯಾಪಾರದಲ್ಲಿ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ವಿಠಲ ಆಳ್ವರವರ ಕನಸಿನ ಕಾಂಪ್ಲೆಕ್ಸ್ ಇದಾಗಿದ್ದು ಬೆಳಿಗ್ಗೆ 10:50ರ ಶುಭ ಮುಹೂರ್ತದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಕಾಂಪ್ಲೆಕ್ಸ್ ನ್ನು ದೀಪ ಪ್ರಜ್ವಲನೆಯ ಮೂಲಕ ಶುಭಾರಂಭ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಡೆಯುವ ಸಭೆಯಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಚಾರ್ವಕ ಅಮರ ಕಾಸ್ಪಡಿ ಶ್ರೀ ಜೋಡುದೈವಗಳ ಕ್ಷೇತ್ರದ ಆಡಳಿತದಾರರಾದ ಕುಸುಮಾಧರ ರೈ ಕಾಸ್ಪಡಿಗುತ್ತು, ನನ್ಯ ತುಡರ್ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಸುಬ್ರಾಯ ಬಲ್ಯಾಯ, ಬುಶ್ರಾ ವಿದ್ಯಾಸಂಸ್ಥೆಯ ಸಂಚಾಲಕ ಅಬ್ದುಲ್ ಅಝೀಜ್ ಬುಶ್ರಾ, ಕ್ಯಾಂಪ್ಕೋ ರಿಟರ್ಡ್ ಚೀಪ್ ಮ್ಯಾನೇಜರ್ ರಾಧಾಕೃಷ್ಣ ಬೋರ್ಕರ್, ಒಡಿಯೂರು ವಿವಿದೋದ್ಧೇಶ ಸಹಕಾರಿ ಸಂಘದ ನಿರ್ದೇಶಕ ಕೆ.ಮೋನಪ್ಪ ಪೂಜಾರಿ ಕೆರೆಮಾರು,ಅರಿಯಡ್ಕ ಗ್ರಾಪಂ ಸದಸ್ಯ ಲೋಕೇಶ್ ಚಾಕೋಟೆ, ಬಾಯಾರ್‌ಗುತ್ತು ಕಲಾಯಿ ರಾಧಾಕೃಷ್ಣ ಆಳ್ವ ಭಾಗವಹಿಸಲಿದ್ದಾರೆ.ಗ್ರಾಹಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಳ್ವ ಕಾಂಪ್ಲೆಕ್ಸ್ ಮಾಲಕ ವಿಠಲ ಆಳ್ವ ಕಲಾಯಿ ಬಾಯಾರುಗುತ್ತು, ನಾಗವೇಣಿ ವಿಠಲ ಆಳ್ವ, ಸೃಜನ್ ಆಳ್ವ ಮತ್ತು ಸೃಜನ್ಯ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಸಜ್ಜಿತ ಕಾಂಪ್ಲೆಕ್ಸ್
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾವು ಪೇಟೆಗೆ ಎಲ್ಲಾ ರೀತಿಯಲ್ಲೂ ಯೋಗ್ಯವಾದ ಸುಸಜ್ಜಿತ ಕಾಂಪ್ಲೆಕ್ಸ್ ಇದಾಗಿದ್ದು, ಕೆಲ ಅಂತಸ್ತು ಮತ್ತು ಒಂದು ಮೇಲಂತಸ್ತನ್ನು ಹೊಂದಿದೆ. ಕಾಂಪ್ಲೆಕ್ಸ್ ಎದುರು ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಎಲ್ಲಾ ರೀತಿಯ ಸೌಕರ್ಯವನ್ನು ಹೊಂದಿದೆ.