ಕಾಂಗ್ರೆಸ್ ಪುಕ್ಕಟೆ ಸೌಲಭ್ಯಕ್ಕೆ ದಲಿತ ಸಮುದಾಯ ಬಿಕ್ಷುಕರಲ್ಲ -ಎಸ್.ಸಿ ಮೋರ್ಚಾ ಸಮಾವೇಶದಲ್ಲಿ ಶಾಂತರಾಮ ಸಿದ್ದಿ

0

ಬಿಜೆಪಿ ಸ್ವಾಭಿಮಾನ ಜೀವನದ ಸಂದೇಶ ನೀಡಿದೆ – ಸಂಜೀವ ಮಠಂದೂರು
ಕಾಂಗ್ರೆಸ್‌ನಿಂದ ದಲಿತ ಸಮುದಾಯಕ್ಕೆ ಅವಮಾನ – ಸೀತಾರಾಮ ಭರಣ್ಯ
ಸರಕಾರ ಋಣ ತೀರಿಸುವ ಕೆಲಸ ಆಗಬೇಕು – ಆಶಾ ತಿಮ್ಮಪ್ಪ
ದೀನ ದಲಿತರ ಕಲ್ಯಾಣಕ್ಕಾಗಿ ಬಿಜೆಪಿ ಸರಕಾರ ಬೇಕು – ವಿನಯನೇತ್ರ
ಬಿಜೆಪಿಯಿಂದ ಸಮುದಾಯದ ಏಳ್ಗೆ – ಮೀನಾಕ್ಷಿ ಶಾಂತಿಗೋಡು

ಪುತ್ತೂರು: 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ.ಸ್ವಾತಂತ್ರ್ಯ ಬಂದು 70 ವರ್ಷದ ಬಳಿಕವೂ ನಾವು ಪರಿಶಿಷ್ಟ ಜಾತಿ ಎಂದು ಗುರುತಿಸಿಕೊಂಡೇ ಇದ್ದೇವೆ. ಎಲ್ಲೋ ಒಂದು ಕಡೆ ಅಂತ್ಯ ಆಗಬೇಕಾಗಿತ್ತು. ಆದರೆ ಕಾಂಗ್ರೆಸ್ ಪುಕ್ಕಟೆ ಸೌಲಭ್ಯ ನೀಡುವ ಮೂಲಕ ನಮ್ಮನ್ನು ಓಟ್ ಬ್ಯಾಂಕ್ ಆಗಿ ಬಳಕೆ ಮಾಡುತ್ತಿದೆ. ಕಾಂಗ್ರೆಸ್‌ನ ಪಕ್ಕಟೆ ಸೌಲಭ್ಯಕ್ಕೇನು ದಲಿತ ಸಮುದಾಯ ಬಿಕ್ಷುಕರಲ್ಲ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರು ಹೇಳಿದರು.


ಪುತ್ತೂರು ತೆಂಕಿಲ ದರ್ಶನ್ ಕಲಾ ಮಂದಿರದಲ್ಲಿ ಮೇ 1ರಂದು ನಡೆದ ಬಿಜೆಪಿ ಎಸ್.ಸಿ.ಸಮಾವೇಶದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು .ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಅನೇಕ ಸಮುದಾಯಗಳು ದಲಿತ ಸಮುದಾಯಕ್ಕೆ ಸೇರುತ್ತವೆ. ಆದರೆ ನಾವು ಇವತ್ತು ಕುರ್ಚಿಯಲ್ಲಿ ಕೂತುಕೊಳ್ಳಲು ಡಾ. ಬಿ.ಆರ್ ಅಂಬೇಡ್ಕರ್ ಅವರು ಕಾರಣಕರ್ತರು. ಹಿಂದೆ ನಮಗೆ ಕುರ್ಚಿ ಮೇಲೆ ಕೂತು ಕೊಳ್ಳಲು ಆಗದಷ್ಟು ಪರಿಸ್ಥಿತಿಯ ಸಮಾಜವಿತ್ತು. ಅದಾದ ಮೇಲೆ ದೇಶಕ್ಕೆ ಸ್ವಾತಂತ್ರ್ಯ ಬಂದು ಕಾಂಗ್ರೆಸ್ ಆಡಳಿತ ಶುರು ಮಾಡಿತ್ತು. ಆಗ ಕಾಂಗ್ರೆಸ್ ಯಾರ್‍ಯಾರನ್ನು ಓಟ್ ಬ್ಯಾಂಕ್ ಆಗಿ ಬಳಕೆ ಮಾಡಬಹುದು ಎಂದು ಯೋಚನೆ ಮಾಡಿತ್ತು. ಯಾಕೆಂದರೆ ಅವರವರಿಗೆ ಅಲ್ಲಲ್ಲೇ ಇಟ್ಟು ಪುಕ್ಕಟೆ ಘೋಷಣೆ ಮಾಡಿ ನಮ್ಮನ್ನು ಅದೇ ಸ್ಥೀತಿಯಲ್ಲಿ ಕಾಣುತ್ತಾ ಬಂದರು. ಇವತ್ತು ಕೂಡಾ ಕಾಂಗ್ರೆಸ್ ಪುಕ್ಕಟೆ ಘೋಷಣೆ ಗ್ಯಾರೆಂಟಿ ಜಾರಿಗೆ ಬಂದ ಮೇಲೆ ಮುಂದೆ 5 ವರ್ಷ ಅವರ ಸರಕಾರ ಬಿದ್ದುಹೋದಾಗ ಏನು ಮಾಡೋದು ಎಂಬುದಕ್ಕೆ ಅವರಲ್ಲೂ ಉತ್ತರವಿಲ್ಲ. ಸೌಲಭ್ಯ ಕೊಡುವುದಾದರೆ ಪುಕ್ಕಟೆ ಕೊಡದೆ ನಮ್ಮ ಕೈಗೆ ಉದ್ಯೋಗ ಕೊಡಿ, ಶಿಕ್ಷಣ ಕೊಡಿ, ಸಮಾಜದಲ್ಲಿ ಗೌರವ ಕೊಡಿ, ಸ್ವಾಭಿಮಾನದ ಬದುಕು ಕೊಡಬೇಕು. ಅದನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಹಾಗಾಗಿ ಕಾಂಗ್ರೆಸ್‌ನ ಪುಕ್ಕಟೆ ಸೌಲಭ್ಯ ಪಡೆಯಲು ದಲಿತ ಸಮುದಾಯ ಬಿಕ್ಷುಕರಲ್ಲ ಎಂದರು.


ನಮ್ಮ ಪರಿವಾರ ಉಳಿಸಲು ಬಿಜೆಪಿಗೆ ಮತ ಹಾಕಿ;
ಇವತ್ತು ದುಡ್ಡಿಗಾಗಿ ಮತ ಮಾರಾಟ ಮಾಡದೆ ತಮ್ಮ ಅಮೂಲ್ಯವಾದ ಮತವನ್ನು ನಮ್ಮ ಪೂಜಾ ಸ್ಥಳಗಳನ್ನು, ನಮ್ಮ ಪರಿವಾರಗಳನ್ನು ಉಳಿಸುವ ಚಿಂತನೆ ಮಾಡಿ. ಬಲಿಷ್ಟವಾದ ಶಾಶ್ವತ 5 ವರ್ಷ ಇರುವ ಸ್ವತಂತ್ರ ಸರಕಾರ ಬರಬೇಕು. ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಬೇಕು. ಈ ನಿಟ್ಟಿನಲ್ಲಿ ಬಿಜೆಪಿಗೆ ಮತ ಹಾಕಿ. ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಮತಚಲಾಯಿಸಿ ಎಂದ ಅವರು ಕೇವಲ ರಸ್ತೆ, ನೀರು, ಅಷ್ಟೆ ಅಲ್ಲ ಸಮಾಜದಲ್ಲಿ ನಮಗೆ ಗೌರವ ಸಿಗಬೇಕಾದರೆ. ನಮ್ಮ ಉಳಿವಿಗಾಗಿ ಬಿಜೆಪಿ ಸರಕಾರ ಬರಬೇಕು. ನನಗೆ ಎಲ್ಲಿಯ ತನಕ ಓಡಾಡಲು ಆಗುತ್ತದೆಯೋ ಅಲ್ಲಿನ ತನಕ ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದು ಶಾಂತಾರಾಮ ಸಿದ್ದಿ ಹೇಳಿದರು.


ಬಿಜೆಪಿ ಸ್ವಾಭಿಮಾನ ಜೀವನದ ಸಂದೇಶ ನೀಡಿದೆ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸಂಸ್ಕೃತಿ ಆಚಾರ ವಿಚಾರಕ್ಕೆ ಸಂಬಂಧಿಸಿ ಭವ್ಯ ಭಾರತದಲ್ಲಿ ದೊಡ್ಡ ಕೊಡುಗೆ ಕೊಟ್ಟವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು. ಸರಕಾರ ಅವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ನೀಡಿದೆ. ರಾಷ್ಟ್ರಪತಿ ಕೋವಿಂದ್, ದ್ರೌಪದಿ ಮುರ್ಮು ಅವರನ್ನು ಅನ್ನತ ಸ್ಥಾನಕ್ಕೆ ಏರಿಸಿದೆ. ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ಹೀಗೆ ಅನೇಕ ಗೌರವ ನೀಡಿದೆ. ಭಾರತ ಸಂವಿಧಾನದ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸಿಗಲು ನಮ್ಮ ಬಿಜೆಪಿ ಸರಕಾರ ಬರಬೇಕಾಯಿತು. ಬಿಜೆಪಿ ಸರಕಾರ ಅವರಿಗೆ ಮರಣೋತ್ತರ ಗೌರವ ನೀಡಿದೆ. ಇವತ್ತು ದಲಿತ ಸಮುದಾಯಕ್ಕೆ ಮತ್ತಷ್ಟು ಸೌಲಭ್ಯ ನಮ್ಮ ಸರಕಾರ ನೀಡುತ್ತಿದೆ. ಕನ್ವರ್ಷನ್ ಸಮಸ್ಯೆ ಇತ್ಯರ್ಥ ಮಾಡಿದೆ. ಮೀಸಲಾತಿ ನೀಡಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನೂರು ಮಂದಿಗೆ ಸ್ಕೂಟರ್, ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಹಲವು ಸೌಲಭ್ಯ, ಕಳೆದ ಮೂರು ವರ್ಷಗಳಲ್ಲಿ ನಾಲ್ಕು ಅಂಬೇಡ್ಕರ್ ಭವನ ನಿರ್ಮಾಣ, ಪುತ್ತೂರು ಬನ್ನೂರಿನಲ್ಲಿ 75 ಸೆಂಟ್ಸ್ ಅಂಬೇಡ್ಕರ್ ಭವನಕ್ಕೆ ಸ್ಥಳ ಮೀಸಲು ಹೀಗೆ ಅನೇಕ ಸೌಲಭ್ಯ ಯೋಜನೆ ನಮ್ಮ ಸರಕಾರ ನೀಡಿದೆ. ಈ ನಿಟ್ಟಿನಲ್ಲಿ ನೀವು ನಿರ್ಣಯ ಮಾಡಿದರೆ ಮುಂದೆ ಉತ್ತಮ ಸರಕಾರ ಆಗಲಿದೆ. ನಾನು ಜೀವ, ಆರೋಗ್ಯ, ಹೊಟ್ಟೆಗೆ ಅನ್ನ ಹಾಕುವ ಗ್ಯಾರೆಂಟಿ ಕೊಟ್ಟಿದ್ದೇವೆ. ಬಿಜೆಪಿಗೆ ಮತ ಹಾಕಿದರೆ ಮಾತ್ರ ಹಿಂದುಗಳು ಬದುಕಲು ಸಾಧ್ಯ ಎಂದರು.


ಕಾಂಗ್ರೆಸ್‌ನಿಂದ ದಲಿತ ಸಮುದಾಯಕ್ಕೆ ಅವಮಾನ:
ಬಿಜೆಪಿ ಚಿಕ್ಕಮಗಳೂರು ಪ್ರಮುಖ್ ಸೀತಾರಾಮ ಭರಣ್ಯ ಅವರು ಮಾತನಾಡಿ ನೆಹರು ಸಂತತಿಯಿಂದ ಹಿಡಿದು ಮನಮೋಹನ್ ಸಿಂಗ್ ತನಕದವರು ನಮ್ಮ ಸಮುದಾಯವನ್ನು ಕತ್ತಲೆಯಲ್ಲಿಟ್ಟಿತ್ತು. ಅಂದು ಸಂವಿಧಾನ ಶಿಲ್ಪಿ ನಮಗಾಗಿ ಹೋರಾಟ ಮಾಡಿದರು. ಅವರು ಚುನಾವಣೆಯಲ್ಲಿ ನಿಂತಾಗ ಅವರನ್ನು ಕಾಂಗ್ರೆಸ್ ಸೋಲಿಸಿತು. ಕೊನಗೆ ಅವರ ಅಂತ್ಯದ ವೇಳೆ ಅವರ ದೇಹ ದಪನ ಮಾಡಲು ಸಹ 3 ಅಡಿ 6 ಅಡಿ ಜಾಗ ಕೊಡದ ಕಾಂಗ್ರೆಸ್ ಗಾಂಧಿ ಪರಿವಾರಕ್ಕೆ ಎಕ್ರೆಗಟ್ಲೆ ಜಾಗ ನೀಡುವ ಮೂಲಕ ದಲಿತ ಸಮುದಾಯಕ್ಕೆ ಅವಮಾನ ಮಾಡಿತ್ತು. ಇವತ್ತು ಮೋದಿ ಸರಕಾರ ಸ್ಕೀಮ್ ಸರಕಾರವಾದರೆ ಕಾಂಗ್ರೆಸ್ ಸರಕಾರ ಬಂದರೆ ಸ್ಕ್ಯಾಮ್ ಆಗಲಿದೆ. ಈ ನಿಟ್ಟಿನಲ್ಲಿ ಮೋದಿ ಸರಕಾರದ ಯೋಜನೆಗಳ ಋಣ ತೀರಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದರು.


ಸರಕಾರ ಋಣ ತೀರಿಸುವ ಕೆಲಸ ಆಗಬೇಕು:
ಬಿಜೆಪಿ ಅಭ್ಯರ್ಥಿ ಅಶಾ ತಿಮ್ಮಪ್ಪ ಅವರು ಮಾತನಾಡಿ ಹಿಂದೆಲ್ಲಾ ಎಲ್ಲಾ ದೈವದೇವಸ್ಥಾನಕ್ಕೆ ಅನುದಾನ ಸರಿಯಾಗಿ ಬರುತ್ತಿರಲಿಲ್ಲ. ಆದರೆ ದೈವ ದೇವಸ್ಥಾನಕ್ಕೂ ಕೋಟಿ ಗಟ್ಟಲೆ ಅನುದಾನ ಕೊಡಬೇಕಾದರೆ ಬಿಜೆಪಿ ಬರಬೇಕಾಯಿತು. ನಮ್ಮ ಸರಕಾರ ಮಾಡಿದ ಯೋಜನೆ, ಶಾಸಕರ ಕೆಲಸವನ್ನು ನೋಡಿ ಮತ ಹಾಕಿ. ನಮಗೆ ಆ ಋಣ ತೀರಿಸುವ ಕೆಲಸ ಮಾಡಬೇಕು ಹಾಗಾಗಿ ನಾವು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.


ದೀನ ದಲಿತರ ಕಲ್ಯಾಣಕ್ಕಾಗಿ ಬಿಜೆಪಿ ಸರಕಾರ ಬೇಕು:
ಬಿಜೆಪಿ ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷ ವಿನಯನೇತ್ರ ಅವರು ಮತಾನಾಡಿ ದೀನ ದಲಿತರ ಕಲ್ಯಾಣ ಆಗದೆ ಭಾರತ ಕಲ್ಯಾಣ ಆಗಲು ಸಾಧ್ಯವಿಲ್ಲ, ಇದಕ್ಕಾಗಿ ಬಿಜೆಪಿ ಸರಕಾರ ಬರಲೇ ಬೇಕು. ಹಳ್ಳಿಯಿಂದ ದಿಲ್ಲಿಯ ತನಕ ಬಿಜೆಪಿ ಸರಕಾರ ಅಡಳಿತದಲ್ಲಿದೆ. ಎಲ್ಲಾ ಆಲೊಚನೆಗಳು ಸಕಾರಗೊಳ್ಳಲಿದೆ ಎಂದರು.


ಬಿಜೆಪಿಯಿಂದ ಸಮುದಾಯದ ಏಳ್ಗೆ:
ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮಾತನಾಡಿ ಸರಕಾರ ಕೊಟ್ಟ ಯೋಜನೆಯ ಎಲ್ಲರಿಗೂ ತುಲುಪಿದೆ. ಇದರಿಂದ ಸಮುದಾಯದ ಏಳ್ಗೆ ಆಗಿದೆ. ಮುಂದೆಯೂ ಯೋಜನೆ ಮುಂದುವರಿಸಲು ಬಿಜೆಪಿ ಸರಕಾರ ಬರಬೇಕು ಎಂದರು.


ರಾಜ್ಯ ಮಹಿಳಾ ಮೋರ್ಚಾದ ಸುಲೋಚನಾ ಭಟ್, ರಾಷ್ಡ್ರೀಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯೆ ಬಿಂದು ಸುರೇಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಂಗಲ ಆಚಾರ್ಯ, ಎಸ್.ಸಿ ಮೊರ್ಚಾದ ಗ್ರಾಮಾಂತರ ಮಂಡಲದ ಅಧ್ಯಕ್ಷ ಬಾಬು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾವೇಶವನ್ನು ಉಡುಪಿ ಶಾಸಕ ರಘುಪತಿ ಭಟ್ ಉದ್ಘಾಟಿಸಿ ಅನ್ಯಕಾರ್ಯಕ್ರಮದ ನಿಮಿತ್ತ ತೆರಳಿದರು. ಬಿಜೆಪಿ ಎಸ್.ಸಿ..ಮೋರ್ಚಾದ ಜಿಲ್ಲಾ ಸದಸ್ಯ ಅಣ್ಣಪ್ಪ ಕಾರೆಕ್ಕಾಡು ಸ್ವಾಗತಿಸಿದರು. ಗೌರಿ ಬನ್ನೂರು ಪ್ರಾರ್ಥಿಸಿದರು. ಎಸ್ ಸಿ ಮೋರ್ಚಾದ ಪ್ರಧಾನ ಕಾರ್ಗದರ್ಶಿ ಚಂದ್ರಶೇಖರ್ ವಂದಿಸಿದರು. ಲೋಹಿತ್ ಅಮ್ಚಿನಡ್ಕ ಮತ್ತು ಕೊರಗಪ್ಪ ಈಶ್ವರಮಂಗಲ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here