ಪುಣಚ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ-ತುಳಿದು ಹೊರಗೆ ಹಾಕುವ ಮೊದಲೇ ನಮ್ಮೊಂದಿಗೆ ಸೇರಿ ಬಿಜೆಪಿಗರಿಗೆ ಹೇಮನಾಥ ಶೆಟ್ಟಿ ಆಹ್ವಾನ

0

ಪುತ್ತೂರು: ನಾನು ಒರಿಜಿನಲ್ ಬಿಜೆಪಿ, ನನಗೆ ಬಿಜೆಪಿಯೇ ಎಲ್ಲಾ ಎಂದು ಹೇಳಿ ಬಿಜೆಪಿಯಲ್ಲೇ ಉಳಿದಿರುವ ಕಾರ್ಯಕರ್ತರನ್ನು, ನಾಯಕರನ್ನು ಬಿಜೆಪಿ ಒಂದು ಹಂತದ ಬಳಿಕ ಪಕ್ಷದಿಂದ ತುಳಿಯುತ್ತದೆ ಹೀಗೆ ತುಳಿತಕ್ಕೊಳಗಾಗುವ ಮುನ್ನವೇ ಕಾಂಗ್ರೆಸ್ ಸೇರಿಕೊಳ್ಳಿ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಬಿಜೆಪಿ ಕಾರ್ಯಕರ್ತರಿಗೆ ಆಹ್ವಾನ ನೀಡಿದರು.
ಸುಭದ್ರ, ಶಾಂತಿಯುತ, ಭ್ರಷ್ಟಾಚಾರ ಮುಕ್ತ ಸರಕಾರ ನೀಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ನಿಮ್ಮದೇ ಶಾಸಕರಿದ್ದರೂ ಹಣ ಕೊಡದೆ ನಿಮ್ಮ ಕೆಲಸಗಳು ನಡೆದಿಲ್ಲ ಈ ಬಗ್ಗೆ ನೋವಿದೆ ಎಂಬ ವಿಚಾರ ನಮಗೆ ಗೊತ್ತಿದೆ. ನೋವು ಸಹಿಸಿಕೊಂಡು ಅಲ್ಲಿರುವುದು ಬೇಡ. ನಾವು ಸಮರ್ಥ ಅಭ್ಯರ್ಥಿಯನ್ನು ನಾವು ಈ ಬಾರಿ ಕಣಕ್ಕಿಳಿಸಿದ್ದೇವೆ .ಅಶೋಕ್ ರೈ ಅವರನ್ನು ಬೆಂಬಲಿಸಿ, ಕಾಂಗ್ರೆಸ್ ಜೊತೆ ಕೈ ಜೋಡಿಸಿ ಎಂದು‌ ಮನವಿ ಮಾಡಿದರು.

LEAVE A REPLY

Please enter your comment!
Please enter your name here