ಉಪ್ಪಿನಂಗಡಿ ದ್ವಿಚಕ್ರ ವಾಹನಗಳ ಡಿಕ್ಕಿ: ಇಬ್ಬರಿಗೆ ಗಾಯ

0

ಉಪ್ಪಿನಂಗಡಿ: ಬೈಕ್ ಹಾಗೂ ದ್ವಿಚಕ್ರ ವಾಹನವೊಂದರ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಹಳೆಗೇಟು ಬಳಿ ಮೇ 1ರ ಸಂಜೆ ಸಂಭವಿಸಿದೆ.


ಅಪಘಾತದಲ್ಲಿ ಬೈಕ್ ಸವಾರ ಮೂಲತಃ ಮಂಡ್ಯ ನಿವಾಸಿ ಮಹೇಶ (37) ಹಾಗೂ ದ್ವಿಚಕ್ರ ವಾಹನ ಸವಾರ ಬನ್ನೂರು ನಿವಾಸಿ ಬಿಜು ಕುಮಾರ್ (47) ಗಾಯಗೊಂಡವರು. ಇವೆರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಈ ಸಂದರ್ಭ ಸವಾರರು ರಸ್ತೆಗೆಸೆಯಲ್ಪಟ್ಟು, ಗಾಯಗೊಂಡಿದ್ದಾರೆ. ಮಹೇಶ್ ಇಲ್ಲಿ ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದು, ಗಂಭೀರ ಗಾಯಗೊಂಡ ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಹಾಗೂ ಬಿಜು ಕುಮಾರ್ ಎಂಬವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here