ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ ಪರವಾಗಿ ಕೊಡಿಪ್ಪಾಡಿ ಗ್ರಾಮ ಸಮಿತಿ ಪಂಚಾಯತ್ ವ್ಯಾಪ್ತಿಯ ಅರ್ಕ, ಅನಾಜೆ, ಬಂನ್ಪುಗುಡ್ಡೆ, ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.ಈ ಸಂದರ್ಭದಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ರಹೀಮ್ ಆನಾಜೆ, ಕಾರ್ಯದರ್ಶಿ ಸಾದಿಕ್, ವಿಭಾಗ ಉಸ್ತುವಾರಿ ಅದ್ದು ಕೊಡಿಪ್ಪಾಡಿ, ಕಾರ್ಯಕರ್ತರಾದ ಅಬ್ದುಲ್ ರಹಿಮಾನ್ ಅನಾಜೆ ,ಅನ್ಸಾರ್, ರಹೀಮ್ ಸಿ.ಎಂ ನಗರ, ನಾಸಿರ್, ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

