ಮಂಗಳೂರು ಎಂಪ್ಲೋಯೀಸ್ ಯೂನಿಯನ್ ಕಾರ್ಮಿಕರ ಸಂಘದಿಂದ ಕಾರ್ಮಿಕರ ದಿನಾಚರಣೆ

0

ಪುತ್ತೂರು : ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಮಂಗಳೂರು ಎಂಪ್ಲೋಯೀಸ್ ಯೂನಿಯನ್ ಕಾರ್ಮಿಕರ ಸಂಘದ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಮೆ.1ರಂದು ಆಚರಿಸಿದರು.

ಮೇರಾಮಜಲು ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮಕ್ಕೆ ನಂದಿನಿ ಸಿಹಿ ತಿಂಡಿ , ಹಣ್ಣು ಹಂಪಲು , ದೈನಂದಿನ ಅಗತ್ಯ ವಸ್ತು,ಊಟ ನೀಡಲಾಯಿತು. ಹಾಗು ಆಶ್ರಮವಾಸಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸ್ವಯಂ ಚಾಲಿತ ಸೌರ ವಿದ್ಯುತ್ಚಕ್ತಿ ದಾರಿ ದೀಪವನ್ನು ಕೊಡುಗೆಯಾಗಿ ಸಂಘದಿಂದ ನೀಡಲಾಯಿತು.

ಸಮಾಜಮುಖಿ ಚಿಂತನೆಯ ಮಾತೃ ಹೃದಯ ಆಶ್ರಮದ ಸಂಸ್ಥಾಪಕ ಹರೀಶ್ ಪೆರ್ಗಡೆ ಕಾಂತಾಡಿ ಗುತ್ತುರಿಗೆ ಸಂಘದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೆ. ಎಮ್. ಎಫ್ ನ ಮೆನೇಜರ್ ಶಿವಶಂಕರ ಸ್ವಾಮಿ, ಮಂಗಳೂರು ಎಂಪ್ಲೋಯೀಸ್ ಯೂನಿಯನಿನ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಹೆರಾಲ್ಡ್ ಮ್ಯಾಕ್ಸಿಮ್ ಪಿಂಟೋ, ಮತ್ತು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಹಾದೇವ ಸ್ವಾಮಿ, ಸುಜನ್ ಕುಮಾರ್, ಮಮತಾ ಎಮ್.ಎಸ್, ದೀಪ ವಿರೂಪಾಕ್ಷ, ಜಯಂತ್, ವಿಘ್ನೇಶ್ ಕಾರಂತ್ ಉಪಸ್ಥಿತರಿದ್ದರು.‌

ಕಾರ್ಯಕ್ರಮವನ್ನು ಸಂಘದ ಪ್ರದಾನ ಕಾರ್ಯದರ್ಶಿ ಪುಷ್ಪರಾಜ್ ಹೆಚ್ ಸ್ವಾಗತಸಿ. ವಂದಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here