ಈಶ್ವರಮಂಗಲ: ಸಿಟಿ ಜ್ಯುವೆಲ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಈಶ್ವರಮಂಗಲದ ಹಿರಾ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಚಿನ್ನದ ಮಳಿಗೆ `ಸಿಟಿ ಜ್ಯುವೆಲ್ಸ್’ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಈ ಸಂದರ್ಭದಲ್ಲಿ ಹಿರಾ ಕಾಂಪ್ಲೆಕ್ಸ್‌ನ ನೆಲ ಮಹಡಿಗೆ ಸ್ಥಳಾಂತರಗೊಂಡು ಮೇ.3ರಂದು ಶುಭಾರಂಭಗೊಂಡಿತು.


ಮಳಿಗೆಯನ್ನು ಆರ್ಯನ್ ರಾಜೇಶ್ ರಿಬ್ಬನ್ ತುಂಡರಿಸಿ ಉದ್ಘಾಟಿಸಿದರು. ಸಿಟಿ ಜ್ಯುವೆಲ್ಸ್‌ನ ಮಾಲಕ ರಾಜೇಶ್ ಅವರ ತಾಯಿ ಪೌಲೋಮಿ ಅವರು ದೀಪ ಪ್ರಜ್ವಲನಗೊಳಿಸಿದರು. ಈಶ್ವರಮಂಗಲ ಹನಿ ಸ್ವೀಟ್ಸ್‌ನ ಮಾಲಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಹಿರಾ ಕಾಂಪ್ಲೆಕ್ಸ್ ಮಾಲಕ ಹಿರಾ ಅಬ್ದುಲ್ ಖಾದರ್ ಹಾಜಿ, ಪ್ರಭಾಕರ ಮಣಿಯಾಣಿ, ಸಾಮಾಜಿಕ ಮುಂದಾಳು ಅಬ್ದುಲ್ಲ ಮೆನಸಿನಕಾನ ಮತ್ತಿತರ ಹಲವರು ಆಗಮಿಸಿ ಶುಭ ಹಾರೈಸಿದರು. ಮಾಲಕ ರಾಜೇಶ್‌ ಮತ್ತು ಸಿಬ್ಬಂಧಿಗಳು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.


ಸ್ಥಳಾಂತರಗೊಂಡು ಶುಭಾರಂಭಗೊಂಡ ಹಿನ್ನೆಲೆಯಲ್ಲಿ ಚಿನ್ನ, ಬೆಳ್ಳಿ ಖರೀದಿಸುವ ಗ್ರಾಹಕರಿಗೆ ಲಕ್ಕಿ ಕೂಪನ್ ನೀಡಲಾಗುತ್ತಿದ್ದು ಪ್ರಥಮ 4 ಗ್ರಾಂ ಚಿನ್ನ, ದ್ವಿತೀಯ 2 ಗ್ರಾಂ ಚಿನ್ನ ಹಾಗೂ ತೃತೀಯ 1 ಗ್ರಾಂ ಚಿನ್ನ ವಿಜೇತರಿಗೆ ನೀಡಲಾಗುತ್ತದೆ. ಮೆ.31ರಂದು ಡ್ರಾ ನಡೆಯಲಿದೆ.

LEAVE A REPLY

Please enter your comment!
Please enter your name here