ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ಪದವಿ ಪುರಸ್ಕಾರ ಸಮಾರಂಭ

0

ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಹಾಗೂ ಎಸ್.ಎಸ್.ಎಲ್.ಸಿ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪುರಸ್ಕಾರ ಸಮಾರಂಭ ನಡೆಯಿತು. ಕಿಂಡರ್ ಗಾರ್ಟನ್ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಪದವಿ ಪುರಸ್ಕಾರ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ ಮುಯಿನುಸ್ಸುನ್ನ ಹಾವೇರಿ ಇದರ ನಿರ್ದೇಶಕರಾದ ಕೆ.ಎಂ ಮುಸ್ತಫ ನಯೀಮಿ ಹಾಗೂ ಕುಂಬ್ರ ಮರ್ಕಝುಲ್ ಹುದಾ ಪದವಿ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಮನ್ಸೂರ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಅಶ್ರಫ್ ಷಾ ಮಾಂತೂರು ಅವರು ಕಳುಹಿಸಿದ ಸಂದೇಶವನ್ನು ಶೈಕ್ಷಣಿಕ ಸಂಯೋಜಕಿ ಮಧು ಜಿ.ಸಿ ಹಂಚಿಕೊಂಡರು. ನಂತರ ಕಿಂಡರ್ ಗಾರ್ಟನ್ ಮಕ್ಕಳಿಗೆ ಪದವಿ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ, ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ರಝಾಕ್, ಶಿಕ್ಷಕಿ ಅಮೃತ ನಾಯ್ಕ್, ಕಿಂಡರ್ ಗಾರ್ಟನ್ ಶಿಕ್ಷಕಿ ಸಮೀನ, ಅಫ್ರೀನ್, ಇಫ್ರತ್, ಜಯ, ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಿಂಡರ್ ಗಾರ್ಟನ್ ನ ಶಿಕ್ಷಕಿ ಶಹನಾಝ್ ಕಾರ್ಯಕ್ರಮ ಸಂಯೋಜಿಸಿದರು. ಆಯಿಷಾ ಎಂ ಐ ವಂದಿಸಿದರು.
ಶಾಲಾ ಪ್ರಾಂಶುಪಾಲರಾದ ರಂಝಿ ಮುಹಮ್ಮದ್ ಕೆ. ಪಿ ಸ್ವಾಗತಿಸಿದರು.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪದವಿ ಪುರಸ್ಕಾರ:
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಡೆದ ಪದವಿ ಪುರಸ್ಕಾರ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಬಿ ಸಿ ರೋಡ್ ಡೈಮಂಡ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಮುಹಮ್ಮದ್ ಅಲ್ತಾಫ್, ಮನ್ಶಾರ ಪ್ಯಾರಮೆಡಿಕಲ್ ಸೈನ್ಸ್ ಕಾಲೇಜ್‌ನ ಪ್ರಾಂಶುಪಾಲ ಹೈದರ್ ಮರ್ದಾಳ ಹಾಗೂ ಶೈಕ್ಷಣಿಕ ಸಂಯೋಜಕಿ ಮಧು ಜಿ.ಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಅಶ್ರಫ್ ಷಾ ಮಾಂತೂರು ಅವರು ಕಳುಹಿಸಿದ ಸಂದೇಶವನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾಯಿತು. ನಂತರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪದವಿ ಪುರಸ್ಕಾರ ನೀಡಲಾಯಿತು. ವಿದ್ಯಾರ್ಥಿಗಳಾದ ಮುಹಮ್ಮದ್ ಶಮ್ಮಸ್, ಫಾತಿಮತ್ ಇಶ ಹಾಗೂ ಆಯಿಶತ್ ಹನ ಅನಿಸಿಕೆ ಹಂಚಿಕೊಂಡರು. ನಂತರ ಶಿಕ್ಷಕರಾದ ದಿವ್ಯ, ಅಬ್ದುಲ್ ಸಮೀರ್ ಹಾಗೂ ಮೊರಲ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಶಿಕ್ಷಕಿಯರಾದ ಸ್ಮಿತಾ ಹಾಗೂ ಮುನೈಝ ಪದವಿ ಸಮಾರಂಭಕ್ಕೆ ಮಕ್ಕಳನ್ನು ಕರೆ ತಂದರು. ದೈಹಿಕ ಶಿಕ್ಷಕರಾದ ಶಕೂರ್ ಹಾಗೂ ಸಂಸ್ಥೆಯ ಲೆಕ್ಕಾಧಿಕಾರಿಯಾದ ಅಬ್ದುಲ್ ರಹಿಮಾನ್ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಬಶೀರ್ ಹಾಜಿ ಹಾಗೂ ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ರಝಾಕ್, ಶಿಕ್ಷಕಿಯಾದ ಸೋಫಿಯಾ ರೋಚ್ ಹಾಗೂ ಸಂಸ್ಥೆಯ ಶಿಕ್ಷಕ ವೃಂದದವರು ಮಕ್ಕಳ ಪೋಷಕರು ಹಾಗೂ ಶಿಕ್ಷಕರ ಕುಟುಂಬಸ್ಥರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರಾದ ರಂಝಿ ಮುಹಮ್ಮದ್ ಕೆ.ಪಿ ಸ್ವಾಗತಿಸಿದರು. ಶಿಕ್ಷಕರಾದ ಸನನ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಇಮ್ತಿಯಾಜ್ ಸಿ.ಎಂ ವಂದಿಸಿದರು.


LEAVE A REPLY

Please enter your comment!
Please enter your name here