‌ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸಲು ಪ್ರಸ್ತಾವನೆ ಮಾಡಿರುವುದು ರಾಜ್ಯದ ಹಿಂದುಗಳ ಮನಸ್ಸಿಗೆ ನೋವಾಗಿದೆ- ಶರಣ್ ಪಂಪ್‌ವೆಲ್

0

ಪುತ್ತೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಮಾಡಿರುವ ವಿರುದ್ದ ವಿಶ್ವ ಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ.

2023ರ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ವಿಶ್ವಹಿಂದೂ ಪರಿಷತ್ತಿನ ಯುವ ವಿಭಾಗ ರಾಷ್ಟ್ರಭಕ್ತ ಬಜರಂಗದಳ ಸಂಘಟನೆಯನ್ನು ನಿಷೇಧಿಸಲು ಪ್ರಸ್ತಾವನೆ ಮಾಡಿರುವುದು ರಾಜ್ಯದ ಹಿಂದುಗಳ ಮನಸ್ಸಿಗೆ ನೋವಾಗಿದೆ. ಈ ಪ್ರಸ್ತಾವನೆಯ ವಿರುದ್ಧ ಬಜರಂಗದಳ ಈಗಾಗಲೇ ಅಭಿಯಾನವನ್ನು ಪ್ರಾರಂಭಿಸಿದ್ದು, ಪ್ರತಿಭಟನೆ, ಪೋಸ್ಟರ್ ಅಭಿಯಾನ, ಎಲ್ಲಾ ದೇವಸ್ಥಾನ ,ದೈವಸ್ಥಾನ, ಭಜನಾ, ಮಠಮಂದಿರಗಳಲ್ಲಿ ಹನುಮಾನ್ ಚಾಲೀಸ, ಇನ್ನೀತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ಗೆ ಮತ ಕೇಳಲು ಪ್ರವೇಶವಿಲ್ಲ- ಫಲಕ ಬಿಡುಗಡೆ
ಕಾಂಗ್ರೆಸ್ ಪಕ್ಷ ಬಜರಂಗದಳ ನಿಷೇಧಕ್ಕೆ ಪ್ರಣಾಳಿಕೆಯಲ್ಲಿ ಪ್ರಸ್ತಾವನೆ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಮನೆ ಮನೆಗೆ ಮತ ಕೇಳಲು ಬಂದಾಗ ಕಾಂಗ್ರೆಸಿಗರಿಗೆ ಮತಕೇಳಲು ಪ್ರವೇಶವಿಲ್ಲ ಎಂಬ ಫಲಕವನ್ನು ಶರಣ್‌ಪಂಪ್‌ವೆಲ್ ಅವರು ಬಿಡುಗಡೆಗೊಳಿಸಿದರು. ಈಗಾಗಲೇ ಕಾಂಗ್ರೆಸ್‌ನವರು ಮನೆ ಮನೆಗೆ ಮತ ಕೇಳಲು ಬಂದಾಗ ಈ ಫಲಕವನ್ನು ಹಿಂದುಗಳು ತಮ್ಮ ಮನೆ ಮುಂದೆ ಅಳವಡಿಸುವಂತೆ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದು ಪರಿಷತ್ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು, ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here