ಸೌಮ್ಯ ಭಟ್ ತಾಯಿಯ ಆಶೀರ್ವಾದ ಪಡೆದ ಅರುಣ್ ಕುಮಾರ್ ಪುತ್ತಿಲ ! ಸೌಮ್ಯ ಭಟ್ ಗೆ ನ್ಯಾಯ ದೊರಕಿಸುವ ಭರವಸೆ

0

ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತೀಲರವರು ಕೆಲ ವರ್ಷಗಳ ಹಿಂದೆ ಹತ್ಯೆಯಾದ ಕಬಕ ನಿವಾಸಿ ಸೌಮ್ಯ ಭಟ್ ರವರ ಮನೆಗೆ ಭೇಟಿ ನೀಡಿ ಅವರ ತಾಯಿಯ ಆಶೀರ್ವಾದ ಪಡೆದರು.

ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಪುತ್ತೂರು ಸೌಮ್ಯ ಭಟ್ ಕೊಲೆಗೆ ನ್ಯಾಯ ಕೊಡಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.

1997 ಆಗಸ್ಟ್ 7ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ಬಿಎಸ್ ಸಿ ವಿದ್ಯಾರ್ಥಿನಿ ಸೌಮ್ಯಳ ಹತ್ಯೆ ನಡೆದಿತ್ತು. ಆದರೆ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಸೌಮ್ಯ ಭಟ್ ಕೊಲೆಗೆ ನ್ಯಾಯ ದೊರಕಿಸಿ ಕೊಡುವ ಹಿನ್ನಲೆಯಲ್ಲಿ ಆಕೆಯ ತಾಯಿಯ ಆಶೀರ್ವಾದ ಪಡೆದರು.

LEAVE A REPLY

Please enter your comment!
Please enter your name here