ಮಾನಹಾನಿಕರ ವೀಡಿಯೋ ಪ್ರಸಾರದ ಬೆದರಿಕೆ- ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ದೂರು

0

ಪುತ್ತೂರು: ತನ್ನ ವಿರುದ್ಧ ಮಾನಹಾನಿಕರ ವೀಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಮಂಗಳೂರು ಪೂರ್ವ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಶಿವಶಂಕರ್ ಶೆಟ್ಟಿ ಮತ್ತು ವಿ ಜೆ ಅಜಯ್ ಅಂಚನ್ ಮಾನಹಾನಿಕರ ವರದಿ ಬಿತ್ತರಿಸುವುದಾಗಿ ಬೆದರಿಕೆ ಹಾಕಿ 25ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣಕ್ಕೆ ಯೂಟ್ಯೂಬ್‌ನಲ್ಲಿ ಮಾನಹಾನಿಕರ ವೀಡಿಯೋ ಪ್ರಸಾರ ಮಾಡಿ ಬೇಡಿಕೆ ಈಡೇರಿಸದಿದ್ದಲ್ಲಿ ಇನ್ನಷ್ಟು ವೀಡಿಯೋಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಎ.28ರಂದು ವಿಜೆ ಅಜಯ್ ಅಂಚನ್ ಮಾಲಕತ್ವದ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ವೀಡಿಯೋವನ್ನು ಹರಿಯಬಿಟ್ಟಿದ್ದು, ಈ ವೀಡಿಯೋದಲ್ಲಿ ಅಜಯ್ ಅಂಚನ್, ಶಿವಶಂಕರ್ ಶೆಟ್ಟಿ ಅವರನ್ನು ಸಂದರ್ಶಿಸುವ ರೀತಿಯಲ್ಲಿ ತೋರಿಸಲಾಗಿದೆ. ಅದರಲ್ಲಿ ಅಶೋಕ್ ರೈ ಜನರಿಗೆ ಮೋಸ ಮಾಡಿದ್ದಾರೆ ಎಂಬುದಾಗಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here