ತಾರಾ ಪ್ರಚಾರಕರನ್ನು ಕಾನೂನು ಬಾಹಿರವಾಗಿ ತನ್ನ ಪ್ರಚಾರಕ್ಕೆ ಬಳಸಿಕೊಳ್ಳದಂತೆ ಪಕ್ಷೇತರ ಅಭ್ಯರ್ಥಿ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು

0


ಪುತ್ತೂರು: ಪಕ್ಷೇತರ ಅಭ್ಯರ್ಥಿ ನಮ್ಮ ತಾರಾ ಪ್ರಚಾರಕರನ್ನು ಕಾನೂನು ಬಾಹಿರವಾಗಿ ತನ್ನ ಪುಚಾರಕ್ಕೆ ಬಳಸಿಕೊಳುತಿರುವುದನ್ನು ನಿರ್ಭಂದಿಸುವಂತೆ ಪುತ್ತೂರು ಬಿಜೆಪಿ ಅಭ್ಯರ್ಥಿ ಎಜೆಂಟ್ ರಾಜೇಶ್ ಬನ್ನೂರು ಅವರು ಪುತ್ತೂರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ರಿ ರವರು ನಮ್ಮ ಬಿಜೆಪಿಯ ತಾರಾ ಪ್ರಚಾರಕರನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಪ್ರಚಾರವನ್ನು ಮಾಡುವ ಬಗ್ಗೆ ಈಗಾಗಲೇ ಈ ಮೊದಲು 2 ಬಾರಿ ದೂರನ್ನು ನೀಡಿರುವುದಾಗಿದೆ ಇದೀಗ ಪತ್ರಿಕೆಗಳಲ್ಲಿ ನಮ್ಮ ಮೇ 6ರಂದು ನಡೆಯುವ ಬಿಜೆಪಿ ಕಾರ್ಯಕ್ರಮದ ತಾರಾ ಪ್ರಚಾರಕರಾದ ಯೋಗಿ ಆದಿತ್ಯನಾಥ್ ರನ್ನು ಸ್ವಾಗತಿಸುವ ಜಾಹಿರಾತನ್ನು ನೀಡುತ್ತಿರುವುದಾಗಿ ನಮ್ಮ ಗಮನಕ್ಕೆ ಬಂದಿರುವುದರಿಂದ ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಇದು ಅತ್ಯಂತ ತುರ್ತಿನ ವಿಷಯವಾಗಿದ್ದು ತಾವೂ ಈ ಕೂಡಲೇ ಅರುಣ್ ಕುಮಾರ್ ಪುತ್ರಿಲ ಅಥವಾ ಅವರ ಅಭಿಮಾನಿಗಳ ಹೆಸರಿನಲ್ಲಿ ಈ ಜಾಹಿರಾತನ್ನು ನೀಡದಂತೆ ಸಂಬಂಧ ಪಟ್ಟ ಪತ್ರಿಕೆಗಳಿಗೆ ಕೂಡಲೇ ನೋಟಿಸನ್ನು ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರನ್ನು ನೀಡುತ್ತಿದ್ದೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here