ಎನ್‌ ಎಂಎಂಎಸ್ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ

0

ಬೆಟ್ಟಂಪಾಡಿ:  ಮಾನವ ಸಂಪನ್ಮೂಲ‌ ಅಭಿವೃದ್ಧಿ ಇಲಾಖೆ(MHRD) ನವದೆಹಲಿ, ಇದರ ಆಶ್ರಯದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಇವರು  2022 -2023 ನೇ ಸಾಲಿನಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ ರಾಜ್ಯಮಟ್ಟದ NMMS ಪರೀಕ್ಷೆಯಲ್ಲಿ ಬೆಟ್ಟಂಪಾಡಿ ನವೋದಯ (ಗ್ರಾಮೀಣ ಕನ್ನಡ ಮಾಧ್ಯಮ) ಪ್ರೌಢಶಾಲೆಯಿಂದ ಪರೀಕ್ಷೆಗೆ ಹಾಜರಾದ 25 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು , ಅವರಲ್ಲಿ 2 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುತ್ತಾರೆ.  ಕೋನಡ್ಕ ದಿ.‌ ಮಹಮ್ಮದ್ ಶರೀಫ್ ಮತ್ತು ದಿಲ್ ಶಾ ಬಾನು ದಂಪತಿಯ ಪುತ್ರ ಮಹಮ್ಮದ್ ನವಾಜ್ ಮತ್ತು ಕೂವೆಂಜ ಅರುಣಚಂದ್ರ ಮತ್ತು ಕವಿತಾ ಕೆ.‌ದಂಪತಿಯ ಪುತ್ರ ಮಿಥುನ್ ಕೆ. ಇವರು ವರ್ಷಕ್ಕೆ 12,000/ ರೂ.ಗಳಂತೆ 4 ವರ್ಷ 48,000/ ರೂ. ವಿದ್ಯಾರ್ಥಿವೇತನ ಪಡೆಯಲಿದ್ದಾರೆ.

ಶಾಲಾ ಶಿಕ್ಷಕಿಯರಾದ ಭುವನೇಶ್ವರಿ ಎಂ., ಪ್ರವೀಣ ಕುಮಾರಿ, ಸುಮಂಗಲ ಕೆ. ಮತ್ತು ಶೋಭಾ. ಬಿ .ಇವರು  ಈ ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯಗುರು ಪುಷ್ಪಾವತಿ ಎಸ್. ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here