ರಾಷ್ಟ್ರೀಯ ಹೆದ್ದಾರಿಯ ಬದಲಿ ರಸ್ತೆ ಎಷ್ಟು ಸುರಕ್ಷಿತ?-ಸಾಮಾಜಿಕ ಕಾರ್ಯಕರ್ತ ದಿನೇಶ್ ಭಟ್ ಪ್ರಶ್ನೆ

0

ಪುತ್ತೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಪುತ್ತೂರಿಗೆ ಬರುವ ಸಂದರ್ಭದಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿದ್ದು, ಪುರುಷರಕಟ್ಟೆ- ಪಂಜಳ- ಪರ್ಪುಂಜ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಗೆ ಬದಲಿ ರಸ್ತೆಯಾಗಿ ಸೂಚಿಸಲಾಗಿದೆ. ಇದೀಗ ಎರಡನೇ ಸಲ ಬದಲಿ ರಸ್ತೆಗೆ ಸೂಚನೆ ನೀಡಲಾಗಿದ್ದು ರಾಷ್ಟ್ರೀಯ ಹೆದ್ದಾರಿಯ ಬದಲಿ ರಸ್ತೆ ಕಿರಿದಾಗಿದ್ದು ಎಷ್ಟು ಸುರಕ್ಷಿತಾ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಭಟ್ ಪ್ರಶ್ನಿಸಿದ್ದಾರೆ.

ಈ ಬದಲಿ ರಸ್ತೆ, ಮಧ್ಯಮ ಪಥದ ರಸ್ತೆಯಾಗಿ ( ಐದುವರೆ ಮೀಟರ್ ಅಗಲವಾದ ಡಾಮರು ಭಾಗ) ಡಾಮರು ಕ್ಯಾರೇಜ್ ವೇ ಹೊಂದಿದೆಯೇ ? ಬಸ್, ಸರಕು ಸಾಗಾಣಿಕೆ ಲಾರಿಗಳು ಕಿರಿದಾದ ಭಾಗದಲ್ಲಿ ಸಿಲುಕಿಕೊಂಡರೆ ಯಾವ ಬದಲಿ ಅಥವಾ ತುರ್ತು ಸ್ಪಂದನೆ ವ್ಯವಸ್ಥೆ ಇದೆಯೇ ? ಹೆದ್ದಾರಿ ಸಂಚಾರ ಅಡಚಣೆಗಳಿಗೆ ಕಾರಣವಾಗುವ ಎಲಾ ಪಕ್ಷ, ಕಾರ್ಯಕ್ರಮ ಸಂಘಟಕರಿಗೆ ಈ ಪ್ರಶೆ ಅನ್ವಯಿಸುತ್ತದೆ. ಸಮರ್ಪಕವಾದ ಬದಲಿ ರಸ್ತೆಯಾಗಿ ಸಿಗಲು ಆಡಳಿತ ವ್ಯವಸ್ಥೆ, ಎಲ್ಲಾ ರಾಜಕೀಯ ಪಕ್ಷಗಳು ಈ ತನಕ ಏನಾದರೂ ಕ್ರಮ ಕೈಗೊಂಡಿವೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here