





ಪುತ್ತೂರು : ಅಂಬಿಕಾ ವಿದ್ಯಾಲಯದಲ್ಲಿ ನಡೆದ ‘AREMYA – 2025’ ಅಂತರ್ ಶಾಲಾ ಸ್ಪರ್ಧೆಗಳಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.


9ನೇ ತರಗತಿಯ ವಿದ್ಯಾರ್ಥಿಗಳಾದ ವೇದಿಕಾ, ಆರುಷಿ ಪುತ್ತೂರಾಯ, ಸೃಷ್ಟಿ ಎ ಮತ್ತು ಶಾರ್ವರಿ ಇವರ ತಂಡವು ಉತ್ಪನ್ನ ಬಿಡುಗಡೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಅಭಿನವ್ ಎದುರ್ಕಳ,ಆರುಷ್ ಕೆ, ಆದಿತ್ಯ ವಿಶಾಲ್ ಮತ್ತು ಹರ್ಷವರ್ಧನ ಇವರ ತಂಡವು ಟ್ರೆಷರ್ ಹಂಟ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.





8 ನೇ ತರಗತಿಯ ವಿದ್ಯಾರ್ಥಿಗಳಾದ ಜನ್ಯ ಮತ್ತು ಚಾರ್ವಿ ವಿಜ್ಞಾನ ಕಾರ್ಯ ಮಾದರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು, ಸುದೀಕ್ಷಾ ಎಸ್. ಭಟ್ ಸೆಮಿನಾರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನವನ್ನು, ಮಾನ್ವಿ ಕಜೆ ಗಾಯನದಲ್ಲಿ ತೃತೀಯ ಸ್ಥಾನವನ್ನು ಹಾಗೂ ಅವನಿ ಶಂಕರ್ ಭಗವದ್ಗೀತೆ ಪಠಣದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.


            







